Advertisement

ಮುಂಬಯಿ: ಮಹಿಳೆಯ ಬೆನ್ನಿಗೆ ಇರಿದು ಗಾಯಗೊಳಿಸಿದ ಅಪರಿಚಿತ ತರುಣ

10:49 AM Jan 06, 2017 | Team Udayavani |

ಮುಂಬಯಿ : ಮುಂಬಯಿಯ ಮಹಾಲಕ್ಷ್ಮೀ ರೇಸ್‌ ಕೋರ್ಸ್‌ ಸಮೀಪ ಅಪರಿಚಿತ ತರುಣನೋರ್ವ ಮಹಿಳೆಯೊಬ್ಬಳನ್ನು ಹರಿತವಾದ ಆಯುಧದಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಿನ್ನೆ ಗುರುವಾರ ತಡ ರಾತ್ರಿ ನಡೆದಿದೆ. 

Advertisement

28ರ ಹರೆಯದ ಮಹಿಳೆಯು ತನ್ನ ಗೆಳೆಯನಿಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದಾಗ ಆಕೆಯ ಮೇಲೆ ಈ ಅಛಾನಕ್‌ ದಾಳಿ ನಡೆದಿದೆ. 

ಅಪರಿಚಿತ ವ್ಯಕ್ತಿಯು ಮಹಿಳೆಯ ಬೆನ್ನಿಗೆ ಇರಿದಿದ್ದಾನೆ. ಪರಿಣಾಮವಾಗಿ ಆಕೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾಳೆ. ಆ ಹೊತ್ತಿಗೆ ಅಲ್ಲಿಗೆ ಬಂದ ಆಕೆಯ ಗೆಳೆಯನು ಆಕೆಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಒಯ್ದಿದ್ದಾನೆ.

ಸ್ಥಳೀಯ ಪೊಲೀಸರು ಈ ಪ್ರಕರಣದಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಮತ್ತು ದಾಳಿಕೋರನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಹಿಳೆಯ ಮೇಲೆ ದಾಳಿಗೈದು ಇರಿದ ತರುಣನು ಆಕೆಗೆ ಪರಿಚಿತತನಿರುವ ವ್ಯಕ್ತಿಯೇ ಅಲ್ಲವೇ ಎಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ; ಮಾತ್ರವಲ್ಲದೆ ಈ ದಾಳಿಯ ಹಿಂದಿನ ಉದ್ದೇಶವೂ ಗೊತ್ತಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next