Advertisement
ಇದನ್ನೂ ಓದಿ:ಎಲ್ಲರ ಕುತೂಹಲ ಡೊಮಿನಿಕಾ ದೇಶದ ಬಗ್ಗೆ…ಭಾರತಕ್ಕೆ ಚೋಕ್ಸಿಯನ್ನು ಗಡಿಪಾರು ಮಾಡಲು ಸಾಧ್ಯವೇ?
ಪತಿಗೆ ಕಳಂಕ ತರುವ ನಿಟ್ಟಿನಲ್ಲಿ ಪತ್ನಿ ಆತನ ಮೊಬೈಲ್ ಫೋನ್ ನಿಂದ ಫೋಟೋ ಮತ್ತು ರೆಕಾರ್ಡಿಂಗ್ ಗಳನ್ನು ಆತನ ಕುಟುಂಬಕ್ಕೆ ಕಳುಹಿಸಿದ್ದಳು. ಇದರಿಂದ ಪತಿಯ ಖಾಸಗೀತನ ಮತ್ತು ಗೌಪ್ಯತೆಗೆ ಧಕ್ಕೆ ತಂದಿರುವುದಾಗಿ ಆರೋಪಿಸಿದ ದುಬೈನ ರಾಸ್ ಅಲ್ ಖೈಮಾದಲ್ಲಿರುವ ಸಿವಿಲ್ ಕೋರ್ಟ್ ಆಕೆಗೆ 5,400 ದಿರಾಮ್ (ಭಾರತದ ಒಂದು ಲಕ್ಷ ರೂಪಾಯಿ) ದಂಡ ಪಾವತಿಸುವಂತೆ ಆದೇಶ ನೀಡಿದೆ. ತನ್ನ ಅನುಮತಿ ಇಲ್ಲದೇ ವರ್ಚಸ್ಸಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಪತಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿ ಪತ್ನಿ ವಿರುದ್ಧ ಪರಿಹಾರಕ್ಕಾಗಿ ದಾವೆ ಹೂಡಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣದಿಂದಾಗಿ ಕೆಲಸಕ್ಕೆ ಗೈರುಹಾಜರಾಗಿದ್ದಲ್ಲದೇ, ಸಂಬಳವೂ ಕೈಗೆ ಸಿಗದಂತಾಗಿದೆ. ಅಷ್ಟೇ ಅಲ್ಲ ಇದರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸುವಂತಾಗಿದೆ ಎಂದು ಪತಿ ಕೋರ್ಟ್ ನಲ್ಲಿ ವಾದಿಸಿದ್ದರು.
Related Articles
Advertisement