Advertisement

ಮದುವೆ ಪ್ರಸ್ತಾವ ತಿರಸ್ಕರಿಸಿದ ಯುವತಿಗೆ ಬೆಂಕಿ ಹಚ್ಚಿದ ಅಪ್ಪ-ಮಗ

04:35 PM Sep 25, 2017 | udayavani editorial |

ಜೈಪುರ : ಮದುವೆ ಪ್ರಸ್ತಾವ ಪ್ರಸ್ತಾವ ತಿರಸ್ಕರಿಸಿದ 18 ವರ್ಷ ಪ್ರಾಯದ ಯುವತಿಗೆ ಬೆಂಕಿ ಹಚ್ಚಿದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ.

Advertisement

ರಾಜಸ್ಥಾನದ ಬನ್ಸ್‌ವಾರಾ ಜಿಲ್ಲೆಯ ಇಸರ್ವಲ ಎಂಬಲ್ಲಿ ಈ  ಅಮಾನುಷ ಘಟನೆಯು ನಡೆದಿದೆ. 

18ರ ಹರೆಯದ ಸೀಮಾ ಮದುವೆ ಪ್ರಸ್ತಾವಕ್ಕೆ ಒಪ್ಪದ ಕಾರಣ ಆಕೆಯ ಮನೆಯಲ್ಲೇ ಕೋಪಗೊಂಡ ಆರೋಪಿ ಯುವಕ ಮತ್ತು ಆತನ ತಂದೆ ಸೇರಿಕೊಂಡು ಆಕೆಗೆ ಬೆಂಕಿ ಹಚ್ಚಿದರು.

ಶೇ. 75ರಷ್ಟು  ಸುಟ್ಟ ಗಾಯಗಳಿಗೆ ಗುರಿಯಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಸೀಮಾ ಳನ್ನು ಬನ್‌ಸ್ವಾರಾ ದಲ್ಲಿನ ಎಂ ಜಿ ಆಸ್ಪತ್ರೆಗೆ ಮೊದಲು  ಸೇರಿಸಲಾಗಿತ್ತು. ಆದರೆ ಆಕೆಯ ಗಂಭೀರ ಸ್ಥಿತಿಯನ್ನು ಪರಿಗಣಿಸಿ ಆಕೆಯನ್ನು ಉದಯಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ರವಿ ಎಂಬಾತನು ತಂದೆಯು ತನ್ನ ಮಗನ ಮದುವೆ ಪ್ರಸ್ತಾವವನ್ನು ಸೀಮಾ ತಿರಸ್ಕರಿಸಿದ್ದಳು. ಇದರಿಂದ ಕ್ರುದ್ಧರಾದ ತಂದೆ – ಮಗ ಇಬ್ಬರೂ ಸೇರಿ ಸೀಮಾ ಳಿಗೆ ಬೆಂಕಿ ಹಚ್ಚಿದರು. 

Advertisement

ಸೀಮಾ ಗೆ ರವಿ ಕಿರುಕುಳ ಕೊಡುತ್ತಿರುವ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ಈ ಮೊದಲೇ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಆಸ್ಪತ್ರೆಯ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ತನಕ ಯಾರನ್ನೂ ಬಂಧಿಸಲಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next