ತಮಿಳುನಾಡು: ನಿದ್ರೆಗೆ ಜಾರಿದ ಕಾರು ಚಾಲಕನ ಕ್ಷಣಿಕ ಲೋಪದದಿಂದ ಅಪಘಾತವೊಂದು ಸಂಭವಿಸಿದ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ಸಂಭವಿಸಿದೆ.
ಕಾರು ಚಾಲಕ ನಿದ್ರೆಗೆ ಜಾರಿದ ಪರಿಣಾಮ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಬಳಿಕ ಅಂಗಡಿಗೆ ಡಿಕ್ಕಿ ಹೊಡೆದಿದೆ ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಫೆಬ್ರವರಿ 11 ರಂದು ಘಟನೆ ನಡೆದಿದ್ದು ಘಟನೆಯ ದೃಶ್ಯ ಹೋಟೆಲ್ ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೆನ್ನತ್ತೂರಿನ ಪಳನಿ ಎಂಬುವವರ ಮಾಲಕತ್ವದ ಉಪಾಹಾರ ಗೃಹ ಇದಾಗಿದ್ದು ಮಧ್ಯಾಹ್ನ ಸುಮಾರು 2.40 ಗಂಟೆ ವೇಳೆಗೆ ಹೋಟೆಲ್ ನಲ್ಲಿ ಮಹಿಳೆ ಸೇರಿ ಕೆಲವರು ಕೆಲಸ ಮಾಡುತ್ತಿದ್ದ ವೇಳೆ ಅತೀ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಗುದ್ದಿ ಅವರನ್ನು ಎಳೆದೊಯ್ದು ಬಳಿಕ ಅಂಗಡಿಯ ದಂಡೆಗೆ ಡಿಕ್ಕಿ ಹೊಡೆದಿದೆ ಪರಿಣಾಮ ಮಹಿಳೆ ಅಂಗಡಿಯ ಒಳಗೆ ಹಾರಿ ಬಿದ್ದಿದ್ದಾರೆ, ಈ ವೇಳೆ ಸ್ಥಳೀಯರು ಮಹಿಳೆಯ ಸಹಾಯಕ್ಕೆ ಓಡಿ ಬಂದಿದ್ದಾರೆ ಅಲ್ಲದೆ ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ ವೇಳೆ, ಚಾಲಕ ಕಳೆದ ಕಳೆದ ಎರಡು ದಿನಗಳಿಂದ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ ಹಾಗಾಗಿ ಮಧ್ಯಾಹ್ನದ ವೇಳೆ ಕಾರು ಚಾಲನೆ ಮಾಡುವಾಗ ನಿದ್ರೆಗೆ ಜಾರಿ ಅತಿವೇಗದಲ್ಲಿ ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಹತ್ತಿರದ ಉಪಹಾರ ಗೃಹಕ್ಕೆ ನುಗ್ಗಿದೆ.