ಬರೇಲಿ: ತೀವ್ರ ಅನಾರೋಗ್ಯ ಪೀಡಿತ ಪತಿಯ ಚಿಕಿತ್ಸೆಗೆ ಹಣವಿಲ್ಲದೆ ಮಹಿಳೆಯೊಬ್ಬಳು 15 ದಿನದ ಹಸುಗೂಸನ್ನೇ ಮಾರಾಟ ಮಾಡಿದ ಆಘಾತಕಾರಿ ಘಟನೆ ಮೀರ್‌ಗಂಜ್‌ನಲ್ಲಿ ನಡೆದಿದೆ.
ವರದಿಯಾದಂತೆ 15 ದಿನದ ಶಿಶುವನ್ನು 45 ಸಾವಿರ ರೂಪಾಯಿಗೆ ಮಾರಾಟ ಮಾಡಿ ಪತಿಯ ಚಿಕಿತ್ಸೆಗೆ ಹಣ ಹೊಂದಿಸಿದ್ದಾಳೆ.
ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನೋವಿನಲ್ಲೇ ಪ್ರತಿಕ್ರಿಯೆ ನೀಡಿದ ಮಹಿಳೆ ‘ನನ್ನ ಪತಿಯ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ತುರ್ತು ಚಿಕಿತ್ಸೆ ಅಗತ್ಯವಾಗಿತ್ತು.ಚಿಕಿತ್ಸೆಗೆ ಹಣ ಹೊಂದಿಸಲು ನನಗೆ ಬೇರೆ ಯಾವುದೇ ಮಾರ್ಗ ಇರಲ್ಲಿಲ್ಲ. ದಿಕ್ಕು ತೋಚದೆ ಮಗುವನ್ನೇ ಮಾರಾಟ ಮಾಡುವ ಸಂದಿಗ್ಧ ಎದುರಾಯಿತು’ಎಂದಿದ್ದಾಳೆ.
ಇಂತಹ ಘಟನೆಗಳು ಉತ್ತರಪ್ರದೇಶದಲ್ಲಿ ಅನೇಕ ನಡೆಯುತ್ತಲೇ ಇದ್ದು 2017 ರ ಮೇ ತಿಂಗಳಿನಲ್ಲಿ ಮಗುವನ್ನು ಕೇವಲ 200 ರೂಪಾಯಿಗೆ ಮಾರಾಟ ಮಾಡಿದ ಪ್ರಕರಣ ವರದಿಯಾಗಿತ್ತು.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಾವು ಎಲ್ಲಾ ಪ್ರಯತ್ನಗಳನ್ನು ನಡೆಸಿ ಮಗು ಮರಳಿ ತಾಯಿಯ ಮಡಿಲು ಸೇರುವಂತೆ ಮಾಡುತ್ತೇವೆ ಎಂದಿದೆ.