Advertisement

JNU ಪ್ರತಿಭಟನೆ: ಪೊಲೀಸ್ ಅಧಿಕಾರಿ ಹೆಬ್ಬೆರಳು ಕಚ್ಚಿದ ಪ್ರತಿಭಟನಾಕಾರ್ತಿ!

10:08 AM Jan 10, 2020 | Hari Prasad |

ನವದೆಹಲಿ: ಕಳೆದ ರವಿವಾರ ಜವಹರಲಾಲ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಇಂದು ಗಂಭೀರ ಸ್ವರೂಪಕ್ಕೆ ತಿರುಗಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದತ್ತ ಜಾಥಾ ನಡೆಸಲು ಉದ್ದೆಶಿಸಿದ್ದರು. ಅವರ ಈ ಪ್ರಯತ್ನವನ್ನು ದೆಹಲಿ ಪೊಲೀಸರು ಅರ್ಧದಲ್ಲೇ ತಡೆದಿದ್ದಾರೆ.

Advertisement

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭದಲ್ಲಿ ಓರ್ವ ಪ್ರತಿಭಟನಾಕಾರ್ತಿ ಹಿರಿಯ ಪೊಲೀಸ್ ಅಧಿಕಾರಿಯ ಕೈ ಬೆರಳನ್ನು ಕಚ್ಚಿದ್ದು ಇದೀಗ ಭಾರೀ ಸುದ್ದಿಯಾಗುತ್ತಿದೆ. ಅಡಿಷನಲ್ ಡಿಜಿಪಿ ಇಂಗಿತ್ ಪ್ರತಾಪ್ ಸಿಂಗ್ ಅವರೇ ಈ ರೀತಿಯಾಗಿ ಮಹಿಳಾ ಪ್ರತಿಭಟನಾಕಾರ್ತಿಯಿಂದ ಕಚ್ಚಿಸಿಕೊಂಡ ಪೊಲೀಸ್ ಅಧಿಕಾರಿ. ವಿದ್ಯಾರ್ಥಿಗಳ ಪ್ರತಿಭಟನಾ ಜಾಥಾ ರಾಷ್ಟ್ರಪತಿ ಭವನದತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಅದನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಿಕ್ಕಾಟ ಸಂಭವಿಸಿತ್ತು. ಇದೇ ಸಂದರ್ಭದಲ್ಲಿ ಡಿಸಿಪಿ ಪ್ರತಾಪ್ ಸಿಂಗ್ ಅವರ ಎಡ ಕೈ ಹೆಬ್ಬರಳಿಗೆ ಒಬ್ಬಾಕೆ ಬಲವಾಗಿ ಕಚ್ಚಿದ್ದಾರೆ. ತನ್ನ ಕೈಯನ್ನು ಬಲವಾಗಿ ಹಿಡಿದು ಕಚ್ಚಲಾರಂಭಿಸಿದ ಪ್ರತಿಭಟನಾಕಾರ್ತಿಯಿಂದ ಬಿಡಿಸಿಕೊಳ್ಳಬೇಕಾದರೆ ಡಿಸಿಪಿಗೆ ಸಾಕುಬೆಕಾಗಿದೆ.

ಘಟನೆಯ ಬಳಿಕ ಡಿಸಿಪಿಯವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಡಿಸಿಪಿ ಕೈ ಬೆರಲು ಕಚ್ಚಿದ ಮಹಿಳಾಮಣಿ ಯಾರೆಂಬುದು ಮಾತ್ರ ಪತ್ತೆಯಾಗಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next