Advertisement

Kerala; ನರ್ಸ್‌ನಂತೆ ನಟಿಸಿ ಆಸ್ಪತ್ರೆಯಲ್ಲಿ ಬಾಣಂತಿಯ ಹತ್ಯೆಗೆ ಯತ್ನ

05:53 PM Aug 05, 2023 | Team Udayavani |

ಪತ್ತನಂತಿಟ್ಟ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ 30 ವರ್ಷದ ಮಹಿಳೆಯೊಬ್ಬಳು ನರ್ಸ್‌ನಂತೆ ನಟಿಸಿ ತನ್ನ ಸ್ನೇಹಿತನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

Advertisement

ಪರುಮಳದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೆರಿಗೆ ನಂತರದ ಆರೈಕೆಗಾಗಿ ಸ್ನೇಹಾ (24) ಅವರನ್ನು ದಾಖಲಿಸಲಾಗಿತ್ತು.ಶುಕ್ರವಾರ, ಆರೋಪಿ ಮಹಿಳೆ ನರ್ಸ್ ವೇಷದಲ್ಲಿ ಸ್ನೇಹಾಳ ಕೋಣೆಗೆ ಪ್ರವೇಶಿಸಿ ಒಂದು ಚುಚ್ಚುಮದ್ದನ್ನು ನೀಡಬೇಕೆಂದು ಹೇಳಿದ್ದಾಳೆ. ಎರಡು ಬಾರಿ ಖಾಲಿ ಸಿರಿಂಜ್ ಬಳಸಿ ರಕ್ತನಾಳಕ್ಕೆ ಚುಚ್ಚಲು ಪ್ರಯತ್ನಿಸಿ ವಿಫಲವಾದಳು. ಮತ್ತೆ ಪ್ರಯತ್ನಿಸಿದಾಗ, ಸ್ನೇಹಾಳ ತಾಯಿ ಅನುಮಾನಗೊಂಡು ನರ್ಸಿಂಗ್ ಸಿಬಂದಿಗೆ ಗೆ ಮಾಹಿತಿ ನೀಡಿದರು”ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ಸ್ನೇಹಾ ಪತಿಯ ಸ್ನೇಹಿತೆ ಅನುಷಾಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆಸ್ಪತ್ರೆ ಅಧಿಕಾರಿಗಳು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅನುಷಾಳ ಸಹೋದರಿ ಮತ್ತು ಸಂತ್ರಸ್ತೆಯ ಪತಿ ಸಹಪಾಠಿಗಳಾಗಿದ್ದರು. ಸಂತ್ರಸ್ತೆಯ ಪತಿ ಸದ್ಯ ವಿದೇಶದಲ್ಲಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next