Advertisement
ಸಂತ್ರಸ್ತೆಯ ಪರೇಡ್ ನಡೆಸುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸಂತ್ರಸ್ತೆಯ ಮಗ ಯುವತಿಯೊಂದಿಗೆ ಓಡಿಹೋಗಿ ಆಕೆಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ಮಾರ್ಚ್ 31 ರಂದು ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
‘ಪಂಜಾಬ್‌ನ ಪ್ರಸ್ತುತ ಎಎಪಿ ಸರ್ಕಾರವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಮೇಲಾಗಿ, ಘಟನೆ ಸಂಭವಿಸಿದಾಗಿನಿಂದ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ”ಎಂದು ಬಿಜೆಪಿ ನಾಯಕ ಎಸ್‌ಎಸ್ ಚನ್ನಿ ಕಿಡಿ ಕಾರಿದ್ದಾರೆ.
ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಮಾತನಾಡಿ, ‘ಈ ಘಟನೆಯನ್ನು ತೀವ್ರ ಪದಗಳಲ್ಲಿ ಖಂಡಿಸಿದರೆ ಸಾಲದು, ನಮ್ಮ ಹೆಣ್ಣನ್ನು ಬೀದಿಯಲ್ಲಿ ಈ ರೀತಿ ಮಾಡಿದ್ದು ನಾಚಿಕೆಗೇಡಿನ ಸಂಗತಿ.ನಮ್ಮ ಗುರುಗಳು ಯಾವತ್ತೂ ಮಹಿಳೆಯರನ್ನು ಗೌರವಿಸಿದ್ದಾರೆ, ಆದರೆ ಇಂದು , ಈ ನಿಷ್ಪ್ರಯೋಜಕ ಸರಕಾರದ ಮುಂದಾಳತ್ವದಲ್ಲಿ ಗಂಡಸರು ಮಹಿಳೆಯ ಬಟ್ಟೆ ಹರಿದು ಗ್ರಾಮದಲ್ಲಿ ಮೆರವಣಿಗೆ ಮಾಡಿ 15 ದಿನ ಕಳೆದರೂ ಪೊಲೀಸರಿಗೆ ಸಿಕ್ಕಿಲ್ಲವೇ?”ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಘಟನೆಯನ್ನು ಖಂಡಿಸಿದ್ದು, ‘ಯಾರೂ ಮಹಿಳೆಗೆಗೆ ಸಹಾಯ ಮಾಡಲು ಮುಂದೆ ಬಂದಿಲ್ಲ. ಪೊಲೀಸರಾಗಲೀ ಅಥವಾ ಸ್ಥಳೀಯರಾಗಲೀ ನೆರವಾಗಿಲ್ಲ. ಇದು ಆಘಾತಕಾರಿ ಘಟನೆಯಾಗಿದೆ ಮತ್ತು ಮಹಿಳಾ ಆಯೋಗ ಈ ವಿಷಯದ ಬಗ್ಗೆ ಸ್ವಯಂ ಅರಿವನ್ನು ತೆಗೆದುಕೊಂಡಿದೆ. ನಾನು ಸದಸ್ಯರನ್ನು ವಿಚಾರಣೆಗೆ ಕಳುಹಿಸುತ್ತಿದ್ದೇನೆ. ಅಪರಾಧಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಮಾದರಿ ನೀತಿ ಸಂಹಿತೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣ ಆಯೋಗಕ್ಕೆ ಪತ್ರ ಬರೆಯುತ್ತೇವೆ” ಎಂದು ತಿಳಿಸಿದ್ದಾರೆ.