ನವದೆಹಲಿ: ಇವತ್ತಿನ ದಿನದಲ್ಲಿ ಹೊಟೇಲ್ ಗೆ ಹೋಗಿ ಊಟ ಮಾಡುವುದು ಕಡಿಮೆಯಾಗಿದೆ. ನಾವು ಎಲ್ಲಿದ್ದೇವೋ ಅಲ್ಲೇ ಬಂದು, ಊಟ, ತಿಂಡಿ ತಂದು ಕೊಡುವ ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆಗಳು ಹುಟ್ಟಿಕೊಂಡಿದ್ದಾವೆ. ಮಹಿಳೆಯೊಬ್ಬರು ಸ್ಯಾಂಡ್ ವಿಚ್ ಆರ್ಡರ್ ಮಾಡಿದಾಗ ವೇಳೆಯಲ್ಲಿ ಅಚ್ಚರಿಯೊಂದು ಕಾದಿತ್ತು.
ಜಾರ್ಜಿಯ ದೇಶದ ಜ್ಯಾಕ್ ಸನ್ ಮೂಲದ ಜೋನ್ನೆ ಆಲಿವರ್ ತನ್ನ ಆಫೀಸಿಗೆ ಹತ್ತಿರವಿರುವ ಕೆಎಫ್ ಸಿ ರೆಸ್ಟೋರೆಂಟ್ ನಿಂದ ಮಧ್ಯಾಹ್ನ ಊಟಕ್ಕೆಂದು ಸ್ಯಾಂಡ್ ವಿಚ್ ಆರ್ಡರ್ ಮಾಡಿದ್ದಾರೆ. ಬಿಸಿಯಾದ ಸ್ಯಾಂಡ್ ವಿಚ್ ಸಂಪೂರ್ಣ ಪ್ಯಾಕ್ ಆಗಿ ಮಹಿಳೆಯ ಕೈಗೆ ಕೆಲವೇ ನಿಮಿಷಗಳಲ್ಲಿ ಸಿಕ್ಕಿದೆ. ಇನ್ನೇನು ತುಂಬಾ ಹಸಿವಾಗಿದೆಯೆಂದು ಸ್ಯಾಂಡ್ ವಿಚ್ ಪ್ಯಾಕ್ ತೆರೆಯಲು ಹೋದಾಗ ಜೋನ್ನೆ ಆಲಿವರ್ ಗೆ ಆಚ್ಚರಿ ಆಗುತ್ತದೆ. ಕಾರಣ ಸ್ಯಾಂಡ್ ವಿಚ್ ಕೆಳಗೆ $543.10 ( 44,000 ಸಾವಿರ) ನಗದು ಕಂಡು ಬಂದಿತ್ತು.
ಆದರೆ ಈ ಮಹಿಳೆ ಕೂಡಲೇ ಸ್ಥಳೀಯ ಪೊಲೀಸ್ ಗೆ ಕರೆ ಮಾಡಿದ್ದಾರೆ. ಪೊಲೀಸರು ರೆಸ್ಟೋರೆಂಟ್ ಸಂಪರ್ಕಿಸಿ, ವಿಚಾರಣೆ ನಡೆಸಿದಾಗ ಇದು ರೆಸ್ಟೋರೆಂಟ್ ನ ದಿನದ ಕಲೆಕ್ಷನ್, ಮಿಸ್ ಆಗಿ ಸ್ಯಾಂಡ್ ವಿಚ್ ಇಟ್ಟ ಬ್ಯಾಗ್ ನಲ್ಲಿ ಹೋಗಿದೆ ಎನ್ನುವುದು ಗೊತ್ತಾಗಿದೆ. ಬಳಿಕ ಪೊಲೀಸರು ನಗದನ್ನು ರೆಸ್ಟೋರೆಂಟ್ ಗೆ ಮರಳಿಸಿದ್ದಾರೆ.
ಇದನ್ನೂ ಓದಿ:“ಗಾಡ್ ಫಾದರ್” ನಟನೆಗೆ ಸಲ್ಮಾನ್ ಖಾನ್ ಒಂದು ಪೈಸೆಯನ್ನೂ ಪಡೆದಿಲ್ಲ.. ಮೆಗಾಸ್ಟಾರ್
ಪ್ರಾಮಾಣಿಕತೆ ಮೆರೆದ ಮಹಿಳೆಗೆ ಅವರು ಪಾವತಿಸಿದ ಹಣವನ್ನು ವಾಪಸ್ ಕೊಟ್ಟು, ಫ್ರೀಯಾಗಿ ಸ್ಯಾಂಡ್ ವಿಚ್ ಕೊಟ್ಟಿದ್ದಾರೆ. ತಮ್ಮದಲ್ಲದ ವಸ್ತವನ್ನು ನಾವು ಇಟ್ಟಕೊಳ್ಳಬಾರದೆಂದು ಸ್ಥಳೀಯ ಮಾಧ್ಯಮವೊಂದಕ್ಕೆ ಜೋನ್ನೆ ಆಲಿವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಘಟನೆ ಬಗ್ಗೆ ಸೆ.14 ರಂದು ಜಾರ್ಜಿಯಾ ದೇಶದ ಸಿಟಿ ಆಫ್ ಜ್ಯಾಕ್ ಸನ್ ಪೊಲೀಸ್ ವಿಭಾಗದ ಪೇಜ್ ನಲ್ಲಿ ಹಂಚಿಕೊಂಡು, ಮಹಿಳೆಯ ಪ್ರಾಮಾಣಿಕತೆಯನ್ನು ಕೊಂಡಾಡಿದೆ.