ಪಟ್ನಾ: ಸರ್ಜರಿ ನಡೆಯುತ್ತಿದ್ದ ವೇಳೆ ವಿದ್ಯುತ್ ಕೈಕೊಟ್ಟ ಕಾರಣ ಟಾರ್ಚ್ ಬೆಳಕಲ್ಲೇ ಸರ್ಜರಿಯನ್ನು ಪೂರೈಸಲಾದ ಅತ್ಯಂತ ಆಘಾತಕಾರಿ ಘಟನೆ ಬಿಹಾರದ ಸಹರ್ಸಾದಲ್ಲಿರುವ ಸದರ್ ಆಸ್ಪತ್ರೆಯಲ್ಲಿ ನಡೆದಿದೆ.
ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆಮಾಡಿರುವ ಸರ್ಜರಿ ವಿಡಿಯೋದಲ್ಲಿ ಕಂಡು ಬರುವಂತೆ ಮಹಿಳಾ ರೋಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಟ್ರೆಚರ್‌ನಲ್ಲಿ ಮಲಗಿರುವುದು ಕಂಡು ಬರುತ್ತದೆ. ಮಹಿಳೆಯ ಸುತ್ತಮುತ್ತ ಕೆಲವು ಮಹಿಳೆಯರಿದ್ದಾರೆ. ಕೆಲವರು ಟಾರ್ಚ್ ಲೈಟನ್ನು ಸರ್ಜರಿ ಸ್ಪಾಟ್‌ನತ್ತ ಹಾಕುತ್ತಿದ್ದಾರೆ.ಸರ್ಜರಿ ಮಾಡುವಾತ ವೈದ್ಯರು ತೊಡುವ ಬಿಳಿ ಅಂಗಿ ತೊಟ್ಟಿಲ್ಲ; ಬದಲು ಖಾಕಿ ಶರ್ಟ್ ಧರಿಸಿರುವುದು ಕಂಡು ಬರುತ್ತದೆ.
ವರದಿಗಳ ಪ್ರಕಾರ ಖಗಾರಿಯಾದ ಸದರ್ ಆಸ್ಪತ್ರೆಗೆ ಜನರೇಟರ್ ವ್ಯವಸ್ಥೆ ಇಲ್ಲ. ಆದುದರಿಂದ ಸರ್ಜರಿ ವೇಳೆ ವಿದ್ಯುತ್ ಕೈಕೊಟ್ಟ ಕಾರಣ ಟಾರ್ಚ್ ಬೆಳಕಲ್ಲೇ ಸರ್ಜರಿ ನಡೆಸಲಾಗಿದೆ.
Related Articles
ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಟಾರ್ಚ್ ಬೆಳಕಲ್ಲೇ 32 ಮಂದಿ ರೋಗಿಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
ಈಗ ಬಿಹಾರದ ತಾಜಾ ಘಟನೆಯ ಬಗ್ಗೆ ಸರಕಾರಿ ಅಧಿಕಾರಿಗಳಿಂದಾಗಲೀ, ಆಸ್ಪತ್ರೆ ಅಧಿಕಾರಿಗಳಿಂದಾಗಲೀ ಈ ತನಕ ಯಾವುದೇ ಸ್ಪಷ್ಟೀಕರಣ ಇಲ್ಲ.