ಬೆಂಗಳೂರು: ಮಹಿಳೆಯೊಬ್ಬರು ಸರಿಯಾದ ಸಮಯಕ್ಕೆ ಕೊರಿಯರ್ ತಲುಪದ ಕಾರಣಕ್ಕೆ ಟ್ವೀಟರ್‌ನಲ್ಲಿ ಸಮಸ್ಯೆಯನ್ನು ಬರೆದು ಡಿಟಿಡಿಸಿ ಸಂಸ್ಥೆಗೆ ಟ್ಯಾಗ್ ಮಾಡಿದ್ದನ್ನು ಗಮನಿಸಿದ ವಂಚಕ ಸಹಾಯ ಮಾಡುವ ನೆಪದಲ್ಲಿ ಮಹಿಳೆಯ ಅಕೌಂಟ್‌ಗೆ ಕನ್ನ ಹಾಕಿದ್ದಾನೆ.
ಕೊರಿಯರ್ ಸಂಸ್ಥೆ ಉದ್ಯೋಗಿ ಹೆಸರಿನಲ್ಲಿ ಮಾತನಾಡಿದ ಅಪರಿಚಿತನ ಮಾತು ನಂಬಿದ ಮಹಿಳೆ ತನ್ನ ಬ್ಯಾಂಕ್ ಖಾತೆಯಿಂದ ಎಂಟು ಸಾವಿರ ರೂ ಕಳೆದುಕೊಂಡಿದ್ದಾರೆ. ಈ ಕುರಿತು ಡಿ ಗ್ರೂಪ್ ಲೇಔಟ್‌ನ ನಿವಾಸಿ ಸೋನಾಕ್ಷಿ ಗರ್ಗ್ ಅವರ ಪತಿ ಅಮಿತ್ ಕುಮಾರ್ ಎಂಬುವನ ವಿರುದ್ಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೋನಾಕ್ಷಿ ಗರ್ಗ್ ಪಾಪರೆಡ್ಡಿ ಪಾಳ್ಯದಲ್ಲಿರುವ ಡಿಟಿಡಿಸಿ ಕೋರಿಯರ್ ಸಂಸ್ಥೆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರೋ ಇಂಡಿಯಾ ಕಚೇರಿಗೆ ಕೆಲ ದಾಖಲಾತಿಗಳನ್ನು ಕಳುಹಿಸಿದ್ದು, ಸೂಕ್ತ ಸಮಯಕ್ಕೆ ಸಕಾಲಕ್ಕೆ ತಲುಪಿರಲಿಲ್ಲ. ಈ ಕುರಿತು ನ.23ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು, ಡಿಟಿಡಿಸಿ ಖಾತೆಗೆ ಟ್ಯಾಗ್ ಮಾಡಿ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಟಿಡಿಸಿ ಸಂಸ್ಥೆ “ಸಮಸ್ಯೆಯನ್ನು ಪರಿಶೀಲಿಸುವುದಾಗಿ’ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು.
ಅದೇ ದಿನ ಮಧ್ಯಾಹ್ನ 12.30ರಲ್ಲಿ ಫೋನ್ ಮಾಡಿದ್ದ ಅಪರಿಚಿತನೊಬ್ಬ ಡಿಟಿಡಿಸಿ ಕೋರಿಯರ್ ಸಂಸ್ಥೆಯ ಸಿಬ್ಬಂದಿ ಅಮಿತ್‌ಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ಕೊರಿಯರ್‌ಗೆ 9 ರೂ. ಕಡಿಮೆ ಸಂದಾಯ ಮಾಡಿದ್ದರಿಂದ ನಿಮ್ಮ ದಾಖಲಾತಿ ತಲುಪಲು ವಿಳಂಬವಾಗಿದೆ’ ಹೀಗಾಗಿ, ಆನ್‌ಲೈನ್ ಕಳುಹಿಸುತ್ತಿದ್ದ ಅದರಲ್ಲಿ ಮಾಹಿತಿ ಹಣ ಕಳುಹಿಸಿ ಎಂದಿದ್ದಾನೆ.
ಆತ ಕಳುಹಿಸಿದ್ದ ಲಿಂಕ್‌ನಲ್ಲಿ ಸೋನಾಕ್ಷಿ ಅವರು ಹೆಸರು, ಆಕ್ಸಿಸ್ ಮತ್ತು ಎಸ್‌ಬಿಐ ಬ್ಯಾಂಕ್ ವಿವರ ಹಾಗೂ ಒಟಿಪಿ ನಂಬರ್ ಹಾಕಿದ್ದು, ಕ್ಷಣಾರ್ಧದಲ್ಲಿ 5 ಸಾವಿರ ರೂ. ವರ್ಗಾವಣೆಯಾಗಿದೆ. ಈ ಬಗ್ಗೆ ಅಮಿತ್, ಕಡಿತಗೊಂಡಿರುವ ಹಣ ನಿಮ್ಮ ಅಕೌಂಟ್‌ಗೆ ಜಮಾವಣೆ ಆಗುತ್ತದೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ಆತನ ಫೋನ್ ಸ್ವಿಚ್ ಆಫ್ ಬಂದಿದೆ.. ಬಳಿಕ ಸಂಜೆ 5 ಗಂಟೆಯಲ್ಲಿ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 3 ಸಾವಿರ ವರ್ಗಾವಣೆಯಾದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.