Advertisement

ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಕೊಂದ ಕಳ್ಳರ ಗ್ಯಾಂಗ್‌, 3 ಲಕ್ಷ ರೂ ಚಿನ್ನಾಭರಣ ಲೂಟಿ

09:40 AM Jul 06, 2019 | Team Udayavani |

ಪಾಲ್‌ಘರ್‌ : ಜಿಲ್ಲೆಯ ವಿರಾರ್‌ ನಲ್ಲಿ 50ರ ಹರೆಯದ ಮಹಿಳೆಯೊಬ್ಬರನ್ನು ಆಕೆಯ ಮನೆಯಲ್ಲೇ ಹೊಡೆದು ಕೊಂದ ಕಳ್ಳರ ಗ್ಯಾಂಗ್‌, ಮೂರು ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ ಘಟನೆ ವರದಿಯಾಗಿದೆ.

Advertisement

ವಿರಾರ್‌ನ ಚಂದನ್‌ಸಾರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಕಳ್ಳರು ಮರದ ಕೋಲಿನಿಂದ ತಲೆಗೆ ಹೊಡೆದು ಕೊಂದು 3.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದರೆಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಪತಿ ಸಂಜೆ ತಡವಾಗಿ ಕೆಲಸ ಮುಗಿಸಿ ಮನೆಗೆ ಮರಳಿದಾಗಲೇ ಪತ್ನಿಯ ಹತ್ಯೆ ನಡೆದಿರುವುದು ಬೆಳಕಿಗೆ ಬಂತು. ಆಕೆ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಕಂಡು ಬಂತು.

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು ಕೊಲೆ, ದರೋಡೆ ನಡೆಸಿದ ತಂಡದ ಶೋಧದಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next