Advertisement

ಕಡಬ: ಶಂಕಿತ ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ

12:55 AM Jun 27, 2019 | Sriram |

ಕಡಬ: ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ಆನಂದ ನಾೖಕ್‌ ಅವರ ಪತ್ನಿ ವೀಣಾ (43) ಬುಧವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Advertisement

ಕೆಲವು ದಿನಗಳಿಂದ ಕಡಬದ ಖಾಸಗಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಳಿಕ ಜ್ವರ ಉಲ್ಬಣಗೊಂಡು ಜೂ. 24ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಜನರಲ್ಲಿ ಆತಂಕ
ಕಳೆದ 2 ತಿಂಗಳಿನಿಂದ ಕಡಬದ ನೂಜಿಬಾಳ್ತಿಲ, ರೆಂಜಿಲಾಡಿ, 102 ನೆಕ್ಕಿಲಾಡಿ ಹಾಗೂ ಕೋಡಿಂಬಾಳ ಗ್ರಾಮದ ಕೆಲವು ಪ್ರದೇಶಗಳಲ್ಲಿ ಜನರು ವ್ಯಾಪಕವಾಗಿ ಶಂಕಿತ ಡೆಂಗ್ಯೂ ಜ್ವರ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಕೋಡಿಂಬಾಳದ ವೀಣಾ ಶಂಕಿತ ಡೆಂಗ್ಯೂಗೆ ಬಲಿಯಾದ ಸುದ್ದಿಯಿಂದಾಗಿ ಸಾರ್ವಜನಿಕ ವಲಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ, ನೆಲ್ಲಿಪಡ್ಡು, ಕುಕ್ಕೆರೆಬೆಟ್ಟು ಪ್ರದೇಶಗಳ ಸುಮಾರು 50 ಮನೆಗಳಲ್ಲಿ ಬಹುತೇಕ ಎಲ್ಲರೂ ಜ್ವರದ ಬಾಧೆಗೆ ಒಳಗಾಗಿದ್ದಾರೆ. ಕೆಲವು ಮಂದಿ ರೋಗಿಗಳು ಮಂಗಳೂರು ಹಾಗೂ ಪುತ್ತೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಡಿಂಬಾಳದ ಕುಂಜ ತ್ತೋಡಿಯ ಲೀಲಾವತಿ ಅಮ್ಮು ಶೆಟ್ಟಿ, ಗುಲಾಬಿ ಪಾಲಪ್ಪೆ, ಭಾರತಿ ಉದೇರಿ ಹಾಗೂ ಮನೋಹರ ಉದೇರಿ ಅವರು ಜ್ವರ ಉಲ್ಬಣಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಡೆಂಗ್ಯೂ: ಹೊಸ ಪ್ರಕರಣಗಳಿಲ್ಲ
ಮಂಗಳೂರು: ಶಂಕಿತ ಡೆಂಗ್ಯೂ ಜ್ವರ ಕಂಡು ಬಂದ ಅರಕೆರೆಬೈಲು ಮತ್ತು ಗೋರಕ್ಷಕ ದಂಡು ಪ್ರದೇಶದಲ್ಲಿ ಬುಧ ವಾರವೂ ವೈದ್ಯಕೀಯ ಶಿಬಿರವನ್ನು ಮುಂದುವರಿ  ಸಲಾಗಿದೆ. ಸದ್ಯ ಜ್ವರ ಹತೋಟಿಯಲ್ಲಿದೆ. ಯಾವುದೇಹೊಸ ಡೆಂಗ್ಯೂ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next