Advertisement

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಗುಂಡಿನ ದಾಳಿ: ಮಹಿಳೆಗೆ ಗಾಯ

12:03 PM May 04, 2018 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ತಂಗದಾರ್‌ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್‌ ಸೈನಿಕರು ಭಾರತೀಯ ಸೇನಾ ಠಾಣೆಗಳನ್ನು ಗುರಿ ಇರಿಸಿ ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಗೆ ಮಹಿಳೆಯೊಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.

Advertisement

ನಿನ್ನೆ ಗುರುವಾರ ರಾತ್ರಿ 11 ಗಂಟೆಯ ಹೊತ್ತಿಗೆ ಆರಂಭಿಸಿದ ಗುಂಡಿನ ದಾಳಿಯನ್ನು ಪಾಕ್‌ ಸೈನಿಕರು ಇಂದು ಶುಕ್ರವಾರ ಬೆಳಗ್ಗೆ 5 ಗಂಟೆಯ ವರೆಗೂ ಮುಂದುವರಿಸಿದರು. 

ಪಾಕ್‌ ಸೈನಿಕರು ಎಸೆದ ಕೆಲವೊಂದು ಶೆಲ್‌ಗ‌ಳು ನಾಗರಿಕರ ವಸತಿ ಪ್ರದೇಶಗಳಲ್ಲಿ ಬಂದು ಬಿದ್ದವು. ಸೈದ್‌ಪೋರಾ ತಾಡ್‌ ನಿವಾಸಿಯಾಗಿರುವ ನೂರ್‌ ಜಹಾನ್‌ ಎಂಬ ಮಹಿಳೆ ಗಾಯಗೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕ್‌ ಸೈನಿಕರ ಗುಂಡಿನ ದಾಳಿಗೆ ಭಾರತೀಯ ಸೈನಿಕರು ತಕ್ಕುದಾದರ ರೀತಿಯಲ್ಲಿ ಗುಂಡಿನ ಉತ್ತರ ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next