Advertisement

ಗೃಹಬಂಧನದಲ್ಲಿದ್ದೇ ಮಗುವಿಗೆ ಜನ್ಮಕೊಟ್ಟ ಕಾರ್ಗಿಲ್‌ ಮಹಿಳೆ

09:15 AM Apr 03, 2020 | Team Udayavani |

ಕಾರ್ಗಿಲ್‌: ಕೋವಿಡ್ 19 ಉಸಿರುಗಟ್ಟಿಸುವ ಸ್ಥಿತಿಯಲ್ಲೂ ಸಿಹಿಸುದ್ದಿಗಳು ಹುಟ್ಟುತ್ತಲೇ ಇವೆ. ಹೋಮ್‌ ಕ್ವಾರಂಟೈನ್‌ನಲ್ಲಿದ್ದ ಕಾರ್ಗಿಲ್‌ ಮಹಿಳೆ, ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ.

Advertisement

ಇಲ್ಲಿನ ಸ್ಯಾಂಕೋ ಹಳ್ಳಿಯಲ್ಲಿ ಕೋವಿಡ್ 19 ಹಬ್ಬಿದ್ದು, ಗರ್ಭಿಣಿಯಾಗಿದ್ದ ಐಷಾ ಎಂಬಾಕೆಯ ಮನೆಯಲ್ಲೂ ಇಬ್ಬರಿಗೆ ಪಾಸಿಟಿವ್‌ ಕಂಡುಬಂದಿದೆ. ಸೋಂಕು ತಗುಲಿರುವ ಸ್ವತಃ ಗಂಡನ ಜತೆಗೆ ಇಡೀ ಕುಟುಂಬ ಗೃಹಬಂಧನದಲ್ಲಿದೆ.

ಮಗುವನ್ನು ಮುದ್ದಾಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅವರಿನ್ನು ಮಗು ನೋಡಲು 14 ದಿನಗಳ ವರೆಗೆ ಕಾಯಬೇಕಾಗಿದೆ. ಸ್ವಯಂ ಸೇವಕರ ಸಹಕಾರದಿಂದ, ಸೂಕ್ತ ಸಮಯದಲ್ಲಿ ಹೆರಿಗೆ ನಡೆಸಲು ಸಾಧ್ಯವಾಗಿದೆ.

ಅಕ್ಕಪಕ್ಕದ ಮನೆಯವರು ಮಗು ಮತ್ತು ತಾಯಿಗೆ ಬೇಕಾದ, ವಸ್ತ್ರ, ಔಷಧ ಇತ್ಯಾದಿಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಮಗುವಿನ ಜನನದಿಂದ ಇಡೀ ಸ್ಯಾಂಕೋ ಹಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next