Advertisement

ಮದುವೆಯಾಗುವುದಾಗಿ ಪೊಲೀಸ್‌ ಅಧಿಕಾರಿಯಿಂದ ಅತ್ಯಾಚಾರ: ದೂರು

11:37 AM Apr 26, 2018 | Team Udayavani |

ಕಾನ್ಪುರ : ಮದುವೆಯಾಗುವ ಭರವಸೆ ನೀಡಿ ಪೊಲೀಸ್‌ ಅಧಿಕಾರಿಯೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಕಾನ್ಪುರದ ಮಹಿಳೆಯೋರ್ವಳು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ.

Advertisement

“ನನ್ನ ಮೇಲೆ ಅತ್ಯಾಚಾರ ನಡೆಸಿರುವ ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿ ಇರಕೂಡದು; ಆತನಿಗೆ ಕಾನೂನು ಪ್ರಕಾರ ಜೈಲು ಶಿಕ್ಷೆಯಾಗಬೇಕು’ ಎ,ದು ಮಹಿಳೆ ಆಗ್ರಹಿಸಿದ್ದಾಳೆ.

“ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ; ತನಿಖೆ ನಡೆಸುತ್ತಿದ್ದೇವೆ; ದೂರು ನೀಡಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next