Advertisement

ಹರಿಯಾಣ ಹೆಚ್ಚುವರಿ CS ವಿರುದ್ಧ ಲೈಂಗಿಕ ಕಿರುಕುಳ ಆರೋಪ

11:11 AM Jun 11, 2018 | udayavani editorial |

ಹೊಸದಿಲ್ಲಿ : ಹರಿಯಾಣದ ಮಹಿಳಾ ಐಎಎಸ್‌ ಅಧಿಕಾರಿಯೋರ್ವರು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಈ ವಿಷಯವನ್ನು ಆಕೆ ತನ್ನ ಫೇಸ್‌ ಬುಕ್‌  ನಲ್ಲಿ ಬಹಿರಂಗಪಡಿಸಿದ್ದಾರೆ.

Advertisement

ತನ್ನ ವಿರುದ್ದದ ಲೈಂಗಿಕ ಕಿರುಕುಳ ಆರೋಪಗಳು ಸುಳ್ಳು ಮತ್ತು ನಿರಾಧಾರವಾದವುಗಳೆಂದು ಹರಿಯಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತಿಕ್ರಿಯಿಸಿದ್ದಾರೆ.

“ಮಹಿಳಾ ಐಎಎಸ್‌ ಅಧಿಕಾರಿ ಮಾಡಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರ. ತಿಂಗಳ ಹಿಂದೆಯಷ್ಟೇ ಆಕೆಯನ್ನು ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆಕೆಗೆ ಕೆಲವು ಸಮಸ್ಯೆಗಳಿರುವುದು ಕ್ರಮೇಣ ನಮಗೆ ಗೊತ್ತಾಯಿತು. ಆಕೆಯ ಬಗ್ಗೆ ಮುತುವರ್ಜಿ ವಹಿಸುವಂತೆ ಸಿಬಂದಿಗಳಿಗೆ ನಾನು ಸೂಚಿಸಿದೆ. ಆದರೂ ಆಕೆ ಅವರೊಂದಿಗೆ ದುರ್ವರ್ತನೆ ತೋರಿದರು’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದರು.

“ಮಹಿಳಾ ಐಎಎಸ್‌ ಅಧಿಕಾರಿಗೆ ತರಬೇತಿ ನೀಡುವ ಕೆಲಸವನ್ನು ನಾನು ನನ್ನ ಪಾಲಿನ ಕರ್ತವ್ಯದ ಭಾಗವಾಗಿ ಮಾಡಿದ್ದೇನೆ; ನಾನು ಯಾವುದೇ ತನಿಖೆಗೆ ಒಳಪಡಲು ಸಿದ್ಧನಿದ್ದೇನೆ ಮಾತ್ರವಲ್ಲ ಸುಳ್ಳು ಪತ್ತೆ ಪರೀಕ್ಷೆಗೆ ಕೂಡ ಎದುರಿಸಲು ತಯಾರಿದ್ದೇನೆ’ ಎಂದವರು ಹೇಳಿದರು. 

2014ರ ಬ್ಯಾಚಿನವರಾಗಿರುವ ಮಹಿಳಾ ಐಎಎಸ್‌ ಅಧಿಕಾರಿ ನಿನ್ನೆ ಭಾನುವಾರ ತನ್ನ ಫೇಸ್‌ ಬುಕ್‌ನಲ್ಲಿ ತೋಡಿಕೊಂಡಿರುವ ಸಂಗತಿಗಳು ಈ ರೀತಿ ಇವೆ :

Advertisement

“ನನ್ನನ್ನು ಆತ ರಾತ್ರಿ ಬಹಳ ಹೊತ್ತು ಕಚೇರಿಯಲ್ಲಿ  ಕೂರುವಂತೆ ಮಾಡುತ್ತಿದ್ದ ಮತ್ತು ಅನಪೇಕ್ಷಿತ  ಲೈಂಗಿಕ ಚರ್ಯೆಗಳನ್ನು ತೋರುತ್ತಿದ್ದ. ನಾನು ಪ್ರತಿರೋಧಿಸಿದರೆ ನನ್ನ ಎಸಿಆರ್‌ನಲ್ಲಿ ಪ್ರತಿಕೂಲ ವರದಿ ಬರೆಯುವುದಾಗಿ ಆತ ನನಗೆ ಬೆದರಿಕೆ ಒಡ್ಡುತ್ತಿದ್ದ”.

”ಈಚೆಗೆ ಆತ ರೋಹಟಕ್‌ನಲ್ಲಿನ ಒಂದು ಕಾರ್ಯಕ್ರಮಕ್ಕೆ ತನ್ನ ಜತೆಗೆ ಬರುವಂತೆ ನನ್ನನ್ನು ಒತ್ತಾಯಪಡಿಸಿದ. ನಾನು ಒಲ್ಲೆನೆಂದು ಖಡಾಖಂಡಿತವಾಗಿ ಆತನಿಗೆ ಹೇಳಿದೆ. ಆತ ನಾನು ಮಾಡುವ ಪ್ರಯತಿಯೊಂದು ಕೆಲಸದಲ್ಲಿ ತಪ್ಪು ಹುಡುಕುತ್ತಿದ್ದ. ಹಾಗೆಂದು ಬೇರೆ ಯಾರು ಕೂಡ ನನ್ನ ಕೆಲಸದಲ್ಲಿ ತಪ್ಪು ಕಾಣುತ್ತಿರಲಿಲ್ಲ”

ಸಂತ್ರಸ್ತ ಮಹಿಳಾ ಐಎಎಸ್‌ ಅಧಿಕಾರಿಯನ್ನು ಉಲ್ಲೇಖೀಸಿ “ದ ಟ್ರಿಬ್ಯೂನ್‌’ ಲೈಂಗಿಕ ಕಿರುಕುಳದ ಈ ವಿಷಯವನ್ನು ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next