Advertisement

ರಾಜಸ್ಥಾನ : ಬಾವಿಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಶವ ಪತ್ತೆ

04:43 PM Aug 08, 2018 | udayavani editorial |

ಜೈಪುರ : ಸಣ್ಣ ಪ್ರಾಯದ ವಿವಾಹಿತ ಮಹಿಳೆ ಮತ್ತು ಆಕೆಯ ಇಬ್ಬರು ಅವಳಿ ಮಕ್ಕಳ ಶವ ಬಾವಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯಿಂದ ವರದಿಯಾಗಿದೆ.

Advertisement

ಮೃತರನ್ನು  ಕೈಲಾಶಿ ಗಾಯರಿ (23), ಆಕೆಯ ಪುತ್ರ ಲವ ಮತ್ತು ಕುಶ (2) ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಮಂಡಪ ಗ್ರಾಮದ ನಿವಾಸಿಗಳು. ನಿನ್ನೆಯಿಂದ ಇವರು ನಾಪತ್ತೆಯಾಗಿದ್ದರು ಎಂದು ಎಸ್‌ಎಚ್‌ಓ ಫ‌ೂಲ್‌ಚಂದ್‌ ತಿಳಿಸಿದ್ದಾರೆ. 

ಮೃತ ಮಹಿಳೆಯ ಗಂಡನು ಕೂಲಿ ಕಾರ್ಮಿಕ ಎಂದು ತಿಳಿದು ಬಂದಿದೆ. ಗ್ರಾಮಸ್ಥರ ನೆರವಿನಿಂದ ಮೃತ ದೇಹಗಳನ್ನು ಬಾವಿಯಿಂದ ಮೇಲೆತ್ತಲಾಯಿತೆಂದು ಎಸ್‌ಎಚ್‌ಓ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next