Advertisement

ಮೃತ ತಂದೆಯನ್ನು ಬದುಕಿಸಲು ಮಗುವಿನ ಬಲಿ ನೀಡಲು ಮುಂದಾದ ಮಹಿಳೆ ಬಂಧನ

03:02 PM Nov 12, 2022 | Team Udayavani |

ನವದೆಹಲಿ : ಮೃತಪಟ್ಟಿದ್ದ ತಂದೆಯನ್ನು ಬದುಕಿಸುವ ಹುಚ್ಚುತನದಿಂದ ಮಗುವೊಂದನ್ನು ಅಪಹರಿಸಿ ಬಲಿ ನೀಡಲು ಮುಂದಾದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಆಗ್ನೇಯ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Advertisement

ಆರೋಪಿಯಿಂದ ಮಗುವನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದ್ದು, ಬಂಧಿತೆ ಕೋಟ್ಲಾ ಮುಬಾರಕ್‌ಪುರ ನಿವಾಸಿ ಶ್ವೇತಾ ಎಂದು ಗುರುತಿಸಲಾಗಿದೆ. ಆಕೆ ಈ ಹಿಂದೆ ಎರಡು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಗರ್ಹಿ ಪ್ರದೇಶದ ಅಪರಿಚಿತ ಮಹಿಳೆಯೊಬ್ಬರು ಎರಡು ತಿಂಗಳ ಗಂಡು ಮಗುವನ್ನು ಅಪಹರಿಸಿದ್ದಾರೆ ಎಂಬ ಮಾಹಿತಿ ಲಭಿಸಿ, ಪ್ರಕರಣವನ್ನು ಭೇದಿಸಲು ಸಬ್ ಇನ್‌ಸ್ಪೆಕ್ಟರ್ ರಾಜಿಂದರ್ ಸಿಂಗ್, ಹೆಡ್ ಕಾನ್‌ಸ್ಟೆಬಲ್‌ಗಳಾದ ರವೀಂದರ್ ಗಿರಿ, ಶೇರ್ ಸಿಂಗ್, ಸಚಿನ್ ಸರೋಹ, ನೀರಜ್ ಕುಮಾರ್ ಮತ್ತು ದಿನೇಶ್ ಕುಮಾರ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ಪೂನಂ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡದ ನೇತೃತ್ವವನ್ನು ಎಸ್‌ಎಚ್‌ಒ ಅಮರ್‌ ಕಾಲೋನಿ ಪೊಲೀಸ್‌ ಠಾಣೆಯ ಪ್ರದೀಪ್‌ ರಾವತ್‌ ವಹಿಸಿದ್ದರು.

ಪೊಲೀಸರ ಪ್ರಕಾರ, ಅಪಹರಣ ಮಾಡಿದ ಮಹಿಳೆ ತನ್ನನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು ತಾನು ಜಚ್ಚಾ-ಬಚ್ಚಾ ಆರೈಕೆಗಾಗಿ ಕೆಲಸ ಮಾಡುವ ಎನ್‌ಜಿಒ ಸದಸ್ಯೆ ಎಂದು ಪರಿಚಯಿಸಿಕೊಂಡಿದ್ದಾಳೆ ಎಂದು ಶಿಶುವಿನ ತಾಯಿ ತಿಳಿಸಿದ್ದಾರೆ.

ತಾಯಿ ಮತ್ತು ಮಗುವಿಗೆ ಉಚಿತ ಔಷಧ ಮತ್ತು ಸಲಹೆ ನೀಡುವುದಾಗಿ ಶ್ವೇತಾ ಭರವಸೆ ನೀಡಿ ನಂತರ, ನವಜಾತ ಶಿಶುವನ್ನು ಪರೀಕ್ಷಿಸುವ ನೆಪದಲ್ಲಿ ಹಿಂಬಾಲಿಸಿ ಅಪಹರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ತನ್ನ ತಂದೆ ಅಕ್ಟೋಬರ್‌ನಲ್ಲಿ ನಿಧನ ಹೊಂದಿದ್ದು, ಅಂತಿಮ ವಿಧಿಗಳ ಸಮಯದಲ್ಲಿ, ಅದೇ ಲಿಂಗದ ಶಿಶುವಿನ ನರಬಲಿಯು ತನ್ನ ತಂದೆಯನ್ನು ಪುನರುಜ್ಜೀವನಗೊಳಿಸಬಹುದು ಮತ್ತು ಅವರನ್ನು ಜೀವಂತಗೊಳಿಸಬಹುದು ಎಂದು ಶ್ವೇತಾ ಬಹಿರಂಗಪಡಿಸಿದ್ದಾಳೆ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next