Advertisement

Rapido Auto: ರ‍್ಯಾಪಿಡೋ ಆಟೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; “ಎಕ್ಸ್‌’ನಲ್ಲಿ ಆಕ್ರೋಶ

12:08 PM Dec 02, 2023 | Team Udayavani |

ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರಿಗೆ ರ‍್ಯಾಪಿಡೋ ಆಟೋ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯ ಗೆಳೆಯ ಈ ವಿಚಾರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾನೆ.

Advertisement

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯ ಸ್ನೇಹಿತ ಎಂದು ಹೇಳಿಕೊಂಡಿರುವ ಅಂಕೂರ್‌ ಬಾಗ್ಚಿ ಎಕ್ಸ್‌ನಲ್ಲಿ ನಡೆದ ಘಟನೆ ಹಂಚಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ರ್ಯಾಪಿಡೊ ಲೈಂಗಿಕ ದೌರ್ಜನ್ಯ ಎಸಗುವವರನ್ನು ಪೋಷಣೆ ಮಾಡುತ್ತಿದೆ. ಹೀಗಾಗಿ ರ್ಯಾಪಿಡೋ ಬಳಸಬೇಡಿ. ಗೆಳತಿಯೊಬ್ಬಳ ಮೇಲೆ ಬುಧವಾರ ರಾತ್ರಿ ರ್ಯಾಪಿಡೊ ಆಟೋ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆಟೋದಲ್ಲಿ ಸಾಗುತ್ತಿದ್ದ ವೇಳೆ ಚಾಲಕ ಮಹಿಳೆಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಆಗ ಆಕೆ ಚಾಲಕನನ್ನು ತಳ್ಳಿದಾಗ ಆತ ಮಹಿಳೆಯನ್ನೇ ಆಟೋ ದಿಂದ ಮಾರ್ಗಮಧ್ಯೆ ಹೊರತಳ್ಳಿದ್ದಾನೆ ಎಂದು ಎಕ್ಸ್‌ನಲ್ಲಿ ಉಲ್ಲೇಖೀಸಿದ್ದಾರೆ.

ನಂತರ ಇದನ್ನು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಈ ವಿಚಾರ ಗಮನಿಸಿದ ಬೆಂಗಳೂರು ಪೊಲೀಸರು, ಕೃತ್ಯ ನಡೆದ ಸ್ಥಳ ಹಾಗೂ ನಿಮ್ಮ ಮೊಬೈಲ್‌ ನಂಬರ್‌ ಮಾಹಿತಿ ಕೊಡುವಂತೆ ಕೇಳಿಕೊಂಡಿದ್ದಾರೆ. ರ್ಯಾಪಿಡೋ ಕಂಪನಿಗೆ ಕರೆ ಮಾಡಿದ ಮಹಿಳೆ ವಿಷಯ ತಿಳಿಸಿದಾಗ, ಅಲ್ಲಿನ ಸಿಬ್ಬಂದಿ ದಯವಿಟ್ಟು ಕ್ಷಮಿಸಿ, ನಾವು ಆಟೋ ಚಾಲಕರ ವಿವರ ಇಟ್ಟುಕೊಂಡಿರುವುದಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next