Advertisement

Maski: ರಿಕ್ಷಾದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

12:04 PM Aug 03, 2024 | Team Udayavani |

ಮಸ್ಕಿ: ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ವೇಳೆ ಆಟೋದಲ್ಲಿ ಗರ್ಭಿಣಿ ಮಹಿಳೆಯೊಬ್ಬಳಿಗೆ ಗಂಡು ಮಗುವಿಗೆ ಜನ್ಮ‌ ನೀಡಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

Advertisement

ಪಟ್ಟಣದ 8ನೇ ಬಡಾವಣೆಯ ಶೇಷಮ್ಮ ಎಂಬ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ಮಾಡಿಸಲು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದನ್ನು ಅರಿತ ಚಾಲಕ ಆಟೋ ನಿಲ್ಲಿಸಿದ್ದಾನೆ.

ತಕ್ಷಣ ಕುಟುಂಬಸ್ಥರು, ನೆರೆ ಹೊರೆ ಮಹಿಳೆಯರು ಆಟೋದ ಸುತ್ತ ಸೀರೆಯಿಂದ ಪರಿದಿ ಕಟ್ಟಿ ಹೆರಿಗೆ ಮಾಡಿಸಿದ್ದಾರೆ. ಆಟೋದಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಮಾಡಿಸಿದ ಮಹಿಳೆಯರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆರಿಗೆ ಸುದ್ದಿ ತಿಳಿದ ತಕ್ಷಣ ಆಶಾ ಕಾರ್ಯಕರ್ತೆಯರು, ಕುಟುಂಬಸ್ಥರು ಮಗುವಿಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಾಮಿಕ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:Wayanad; 358ಕ್ಕೇರಿದ ಮೃತರ ಸಂಖ್ಯೆ, ಆಹಾರವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದ ಕುಟುಂಬ… 

Advertisement

Udayavani is now on Telegram. Click here to join our channel and stay updated with the latest news.

Next