Advertisement

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

09:26 AM Sep 14, 2024 | Team Udayavani |

ದಾಂಡೇಲಿ : ನಗರದ ಲೆನಿನ್ ರಸ್ತೆಯ ಕೆಪಿಸಿ ವಸತಿಗೃಹ ಪ್ರದೇಶ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಿಂಡೊಂದು ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಬಾಲಕ ಸ್ಥಳಿಯ ನಿವಾಸಿ ಯೋಗೇಶ್ ಕುಮಾರ್ ಅವರ ಮಗನಾದ ಎಂಟು ವರ್ಷ ವಯಸ್ಸಿನ ಓಂವೀರ್ ಯೋಗೇಶ್‌ ಕುಮಾರ್ ಎಂಬಾತನಾಗಿದ್ದಾನೆ. ಈತನು ಮನೆಯ ಹತ್ತಿರದ ಅಂಗಡಿಗೆ ಹೋಗಿ ಹಿಂದಿರುಗಿ ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ಬೀದಿನಾಯಿಗಳು ದಾಳಿ ಮಾಡಿವೆ. ಈ ಸಂದರ್ಭದಲ್ಲಿ ಸ್ಥಳೀಯರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬೀದಿ ನಾಯಿಗಳು ಬಾಲಕನಿಗೆ ಮೂರ್ನಾಲ್ಕು ಕಡೆ ಕಚ್ಚಿದ್ದು, ತಕ್ಷಣವೇ ಆತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿ ಇದ್ದು, ಪ್ರತಿ ರಸ್ತೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಹಿಂಡುಗಟ್ಟಲೆ ಬೀದಿ ನಾಯಿಗಳಿದ್ದು, ಭಯದ ವಾತಾವರಣವನ್ನು ನಿರ್ಮಿಸುತ್ತಿದೆ. ಇದನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೆ ಬಹುದೊಡ್ಡ ಅನಾಹುತ ನಡೆಯಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬೀದಿ ನಾಯಿಗಳ ನಿಯಂತ್ರಣಕ್ಕೆ ತ್ವರಿತ ಕ್ರಮವನ್ನು ಕೈಗೊಳ್ಳಬೇಕೆಂದು ಪ್ರವಾಸೋದ್ಯಮಿ ರವಿಕುಮಾರ್ ನಾಯಕ ಮತ್ತು ಮುಖಂಡರಾದ ರವೀಂದ್ರ ಶಾ ಅವರು ಮಾಧ್ಯಮದ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: US Election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರಂತೆ ಸುನೀತಾ ವಿಲಿಯಮ್ಸ್ ಮತ್ತು ಬುಚ್

Advertisement

Udayavani is now on Telegram. Click here to join our channel and stay updated with the latest news.