Advertisement

ಐಸಿಸ್‌ ಕಾರ್ಯಕರ್ತೆಗೆ ಏಳು ವರ್ಷ ಜೈಲು

06:00 AM Mar 25, 2018 | Team Udayavani |

ಕೊಚ್ಚಿ: ಕೇರಳದಲ್ಲಿ ಐಸಿಸ್‌ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ ಪ್ರಕರಣ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯ ಶನಿವಾರ ಐಸಿಸ್‌ನ ಮಹಿಳಾ ಕಾರ್ಯಕರ್ತೆ ಯಾಸ್ಮಿನ್‌ ಮೊಹಮ್ಮದ್‌ ಜಹೀದಾಗೆ 7 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮೊದಲು ಶಿಕ್ಷೆಗೆ ಒಳಗಾದ ಆರೋಪಿ ಈಕೆ.

Advertisement

ಜಹೀದಾ ಬಿಹಾರ ಮೂಲದವಳಾಗಿದ್ದು, ಈಕೆ ಐಸಿಸ್‌ ಸೇರಲು ಕಾಬೂಲ್‌ಗೆ ತನ್ನ ಮಗುವಿನೊಂದಿಗೆ ಹೊರಟಿದ್ದಾಗ 2016ರ ಜು. 30ರಂದು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಬಂಧಿಸಲಾಗಿತ್ತು. ಪ್ರಕರಣ ದಲ್ಲಿ ಒಟ್ಟು 15 ಆರೋಪಿಗಳಿದ್ದು, ಜಹೀದಾ 2ನೇ ಆರೋಪಿ. ಅಬ್ದುಲ್‌ ರಶೀದ್‌ ಅಬ್ದುಲ್ಲಾ ಮೊದಲ ಆರೋಪಿ. ಈತನೇ ಪ್ರಕರಣದ ಸೂತ್ರಧಾರ.

ಕಾಸರಗೋಡು ತಾಲೂಕಿನಲ್ಲಿ ಕಳೆದ ವರ್ಷ ಹಲವು ಯುವಕರು ತಮ್ಮ ಕುಟುಂಬದೊಂದಿಗೆ ಐಸಿಸ್‌ ಸೇರಲು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದ್ದು, ಅವರಿಗೆ ಉಗ್ರ ಸಂಘಟನೆಗೆ ಸೇರುವಂತೆ ಪ್ರೇರೇಪಿಸಿದ್ದೇ ರಶೀದ್‌ ಮತ್ತು ಜಹೀದಾ. ಇವರು ಕಾಸರಗೋಡು ಹಾಗೂ ಇತರ ಪ್ರದೇಶಗಳಲ್ಲಿ ಯುವ ಕರ ತಲೆಗೆ ಜೆಹಾದ್‌ ಸಿದ್ಧಾಂತವನ್ನು ತುಂಬುವಂಥ ತರಗತಿಗಳನ್ನೂ ನಡೆಸು ತ್ತಿದ್ದರು. ಈ ಕುರಿತು ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಇವರಿಬ್ಬರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ 15 ಮಂದಿ ಆರೋಪಿ ಗಳಿದ್ದು, ಇಬ್ಬರ ವಿರುದ್ಧ ಮಾತ್ರ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಏಕೆಂದರೆ, ರಶೀದ್‌ ಸಹಿತ ಉಳಿದ ಆರೋಪಿಗಳು ಅಫ್ಘಾನಿಸ್ಥಾನ ಮತ್ತು ಸಿರಿಯಾದಲ್ಲಿ ದ್ದಾರೆ. ಈ ಪೈಕಿ ಮೂವರು ಅಫ್ಘಾನ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

4 ತಿಂಗಳಲ್ಲಿ ಮುಗಿದ ವಿಚಾರಣೆ: ಈ ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿತ್ತು. ಕಳೆದ ನವೆಂಬರ್‌ನಲ್ಲಿ ವಿಚಾರಣೆ ಆರಂಭಿಸಿದ ನ್ಯಾಯಾಲಯ ಕೇವಲ ನಾಲ್ಕೇ ತಿಂಗಳಲ್ಲಿ ಅದನ್ನು ಪೂರ್ಣ ಗೊಳಿಸಿ ತೀರ್ಪನ್ನೂ ಪ್ರಕಟಿಸಿದೆ.

ಯಾವುದೀ ಪ್ರಕರಣ?
2016ರ ಮೇ ಮತ್ತು ಜುಲೈಯಲ್ಲಿ ದೇಶ ಬಿಟ್ಟು ಹೋದ ಕಾಸರಗೋಡಿನ 14 ಮಂದಿಗೆ ಸಂಬಂಧಿಸಿದ ಪ್ರಕರಣವಿದು. ತಮ್ಮ ಕುಟುಂಬಗಳ ಜತೆ ತೆರಳಿದ್ದ ಇವರು ಈಗಾಗಲೇ ಐಸಿಸ್‌ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next