Advertisement

ಬ್ಲ್ಯಾಕ್‌ ಫಂಗಸ್‌ಗೆ ಮಹಿಳೆ ಸಾವು

06:29 PM Jun 04, 2021 | Team Udayavani |

ಮಂಡ್ಯ: ಕಪ್ಪು ಶೀಲಿಂಧ್ರ ಸೋಂಕಿಗೆ ಜಿಲ್ಲೆಯಲ್ಲಿ ಎರಡನೇ ಸಾವು ಸಂಭವಿಸಿದ್ದು, ಮಹಿಳೆಯೊಬ್ಬರು ಗುರುವಾರ ಬಲಿಯಾಗಿದ್ದಾರೆ.

Advertisement

ಕೆ.ಆರ್‌.ಪೇಟೆ ಮೂಲದಲಕ್ಷ್ಮಮ್ಮ (61) ಮಹಿಳೆ ಗುರುವಾರಮೃತಪಟ್ಟಿದ್ದಾರೆ. ಕೋವಿಡ್‌ ಸೋಂಕಿಗೆಒಳಗಾಗಿದ್ದ ಅವರ ಸ್ಥಿತಿ ಗಂಭೀರವಾಗಿತ್ತು.ಅಲ್ಲದೆ ದೇಹಕ್ಕೆ ಸ್ಟ್ರೋಕ್‌ ಕೂಡ ಆಗಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬುಧವಾರ ಮಂಡ್ಯದ ರಂಗನಾಥ ಬ್ಲ್ಯಾಕ್‌ಫಂಗಸ್‌ಗೆ ಬಲಿಯಾಗಿದ್ದರು.

ಅವರನ್ನುನಗರದ ಮಿಮ್ಸ್‌ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಇದುವರೆಗೂ 5ಮಂದಿಗೆಬ್ಲ್ಯಾಕ್‌ ಫಂಗಸ್‌ ಪತ್ತೆಯಾಗಿತ್ತು.ಆದರಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಐದುಮಂದಿಗೂ ಮೊದಲು ಕೊರೊನಾ ಸೋಂಕು ದೃಢಪಟ್ಟು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು .

ಇವರುಬಿಪಿ, ಶುಗರ್‌ನಿಂದ ಬಳಲುತ್ತಿದ್ದರು. ಈಹಿನ್ನೆಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕುಪತ್ತೆಯಾಗಿದೆ.ಮಂಡ್ಯ ಒಬ್ಬರು ಹಾಗೂಶ್ರೀರಂಗಪಟ್ಟಣದ ಇಬ್ಬರಿಗೆ ಕಪ್ಪು ಶೀಲಿಂಧ್ರಪತ್ತೆಯಾಗಿದ್ದು, ಪ್ರತ್ಯೇಕ ವಾರ್ಡ್‌ನಲ್ಲಿಚಿಕಿತ್ಸೆ ಮುಂದುವರೆಸಲಾಗಿದ್ದು, ಬ್ಲ್ಯಾಕ್‌ಫಂಗಸ್‌ಗೆಔಷಧಬಳಕೆಮಾಡಲಾಗುತ್ತಿದೆಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next