Advertisement

ಗರ್ಭಿಣಿಯೆಂದು ತಿಳಿದ 48 ಗಂಟೆಗಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ 23 ರ ಯುವತಿ!

07:57 PM Oct 18, 2022 | Team Udayavani |

ವಾಷಿಂಗ್ಟನ್‌: ಕಳೆದ ಕೆಲ ದಿನಗಳ ಹಿಂದೆ ಆ್ಯಪಲ್‌ ವಾಚ್‌ ವೊಂದು ಮಹಿಳೆ ಗರ್ಭಿಣಿಯಾಗಿದ್ದಾಳೆ ಎನ್ನವುದನ್ನು ಆಕೆಯ ಆರೋಗ್ಯದಲ್ಲಿನ ಏರುಪೇರನ್ನು ಗಮನಿಸಿ, ಮಹಿಳೆಗೆ ವೈದ್ಯರು ಸೂಚಿಸುವ ಮೊದಲೇ ಸೂಚಿಸಿತ್ತು. ಇಂಥದ್ದೇ ಮತ್ತೊಂದು ಘಟನೆ ಅಮೆರಿಕಾದಲ್ಲಿ ನಡೆದಿದೆ.

Advertisement

ಅಮೆರಿಕಾದ ಒಮಾಹಾ ಪ್ರದೇಶದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ 23 ವರ್ಷದ ಯುವತಿ ಪೇಟನ್ ಸ್ಟೋವರ್ ಅವರಿಗೆ ತಲೆ ಸುತ್ತು, ದೇಹದಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಇದು ಕೆಲಸದ ಒತ್ತಡದಿಂದ ಇರಬಹುದೆಂದು ಅಂದುಕೊಳ್ಳುತ್ತಾರೆ. ಆದರೆ ಕಾಲುಗಳು ಬಾತಲು, ದೇಹದಲ್ಲಿ ಬದಲಾವಣೆ ಆಗುತ್ತಿರುವುದು ಮನಕಂಡ ಪೇಟನ್ ಸ್ಟೋವರ್ ವೈದ್ಯರ ಬಳಿ ತೆರಳುತ್ತಾರೆ. ಅಲ್ಲಿ ವೈದ್ಯರು ನೀವು ತಾಯಿ ಆಗುತ್ತಿದ್ದೀರಿ, ನಿಮ್ಮ ಮಗು ಶೀಘ್ರದಲ್ಲಿ ಬರುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಪೇಟನ್ ಸ್ಟೋವರ್ ಮತ್ತು ಅವರ ಗೆಳೆಯನಿಗೆ ಅಚ್ಚರಿ ಆಗುತ್ತದೆ. ಏಕಂದರೆ ಪೇಟನ್ ಗೆ ತಮ್ಮ ಹೊಟ್ಟೆಯಲ್ಲಿ ಮಗುವಿದೆ ಎನ್ನುವುದು ಗೊತ್ತಾಗುವುದೇ ಆವಾಗಲೇ.

ಮುಂದುವರೆದು ಪರೀಕ್ಷೆ ಮಾಡಿಸುತ್ತಾರೆ, ಅಲ್ಟ್ರಾಸೌಂಡ್‌ ಮಾಡಿಸುತ್ತಾರೆ ಅಲ್ಲಿಯೂ ಪೇಟನ್ ಸ್ಟೋವರ್ ಗರ್ಭಿಣಿ ಆಗಿದ್ದಾರೆ ಎನ್ನುವುದು ಖಚಿತವಾಗುತ್ತದೆ.

ಸಮಯ ಕಳೆಯುತ್ತಿದ್ದಂತೆ, ಪೇಟನ್ ಕಿಡ್ನಿ ಹಾಗೂ ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ವೈದ್ಯರು, ನೀವು ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಎಮರ್ಜೆನ್ಸಿ ವಾರ್ಡ್‌ ಗೆ ಕರೆದುಕೊಂಡು ಹೋಗುತ್ತಾರೆ. ಕೆಲ ಕ್ಷಣದ ಬಳಿಕ ಪೇಟನ್ ಗಂಡು ಮಗುವಿಗೆ ಜನ್ಮ ನೀಡುತ್ತಾರೆ.

ಪೇಟನ್ ಮಗುವಿಗೆ ಕಾಶ್ ಎಂದು ಹೆಸರಿಟ್ಟಿದ್ದಾರೆ.

Advertisement

ಪೇಟನ್ ಅವರಿಗೆ ಪ್ರೀ ಎಕ್ಲಾಂಪ್ಸಿಯಾ ಇತ್ತು. (ಗರ್ಭಾವಸ್ಥೆಯಲ್ಲಿ ಸಂಭವಿಸಬಹುದಾದ ಅಧಿಕ ರಕ್ತದೊತ್ತಡ) ಮಗು 10 ವಾರಗಳಕ್ಕಿಂತ ಮುಂಚಿತವಾಗಿ ಜನಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಮಗು 1 ಕಿಲೋ, 800 ಗ್ರಾಂ ಇದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next