Advertisement

108 ವಾಹನದಲ್ಲಿಯೇ ಹೆರಿಗೆ

01:10 AM Dec 14, 2018 | Team Udayavani |

ಉಡುಪಿ: ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆ ಆರೋಗ್ಯ ರಕ್ಷಾ ಕವಚ (108) ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಉಡುಪಿಯಲ್ಲಿ ಗುರುವಾರ ನಡೆಯಿತು. ಮಣಿಪಾಲ ಸಮೀಪ ಈಶ್ವರನಗರದ ಆಶಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಹೋಗುವುದಕ್ಕೆಂದು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಹೋಗುವ ಹಾದಿಯಲ್ಲಿ ಉಡುಪಿ ಸಿಟಿ ಬಸ್‌ ನಿಲ್ದಾಣ ಸಮೀಪ ಹೆರಿಗೆ ನೋವು ಹೆಚ್ಚಾಯಿತು. ಈ ಸಂದರ್ಭ ವಾಹನದಲ್ಲಿದ್ದ ತುರ್ತು ವೈದ್ಯಕೀಯ ತಜ್ಞ (ಇಎಂಟಿ) ಕಾಶೀನಾಥ ಪೂಜಾರ ಅವರು ವಾಹನದ ಚಾಲಕ ಬಸವರಾಜ ಮೇಟಿ ಅವರ ಸಹಾಯದಿಂದ ಹೆರಿಗೆ ಮಾಡಿಸಿದರು. ಆಶಾ ಅವರು ಗಂಡು ಮಗುವಿಗೆ ಜನ್ಮವಿತ್ತಿದ್ದು ತಾಯಿ ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ಕಾಶೀನಾಥ ಪೂಜಾರ ತಿಳಿಸಿದ್ದಾರೆ. ಈ ಸಂದರ್ಭ ಆಶಾ ಅವರ ಸಂಬಂಧಿ ಕೂಡ ವಾಹನದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next