Advertisement

ಈ ವಿಡಿಯೋ ವೈರಲ್ ಆಗಿದ್ದು ಯುವತಿಯ ಡ್ಯಾನ್ಸ್ ನಿಂದಲ್ಲ…ಅಸಲಿ ಕಾರಣವೇ ಬೇರೆ!

02:12 PM Oct 08, 2022 | Team Udayavani |

ನವದೆಹಲಿ: ಇತ್ತೀಚೆಗೆ ಇನ್ಸ್ ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವ ನಿಟ್ಟಿನಲ್ಲಿ ಜನರು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುವುದು ಸಾಮಾನ್ಯ ಸಂಗತಿಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಲವರು ಡ್ಯಾನ್ಸ್ ಮಾಡುವ ಮೂಲಕ ಕಿರಿಕಿರಿ ಉಂಟು ಮಾಡಬಹುದು, ಇಲ್ಲವೇ ಕುತೂಹಲ ಹುಟ್ಟಿಸಬಹುದು. ಅದೇ ರೀತಿ ಯುವತಿಯೊಬ್ಬಳು ಸುಶ್ಮಿತಾ ಸೇನ್ ದಿಲ್ಬರ್ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ಇಂಟರ್ನೆಟ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ವೈರಲ್ ಆಗಿದ್ದು ಯುವತಿಯ ಡ್ಯಾನ್ಸ್ ನಿಂದಾಗಿ ಅಲ್ಲ!

Advertisement

ಇದನ್ನೂ ಓದಿ:ಲೋಕಾ ಬಲೆಗೆ ಬಿದ್ದ ಚಿಕ್ಕಜಾಲ ಪೊಲೀಸರ ಲಂಚದ ಕಥೆ: ಸಾಕ್ಷಿ ನೀಡಿದ ಫೋನ್ ಪೇ!

ಟ್ವೀಟರ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಜನನಿಬಿಢ ಪ್ರದೇಶದಲ್ಲಿ ಯುತಿಯೊಬ್ಬಳು ದಿಲ್ಬರ್ ಹಾಡಿಗೆ ಡ್ಯಾನ್ಸ್ ಮಾಡುವ ದೃಶ್ಯವಿದೆ. ಆದರೆ ನಿಮ್ಮ ಗಮನ ಸೆಳೆಯೋದು ಮಾತ್ರ ಈ ಯುವತಿಯಲ್ಲ, ಯಾಕೆಂದರೆ ಯುವತಿಯ ಹಿಂಭಾಗದಲ್ಲಿ ವ್ಯಕ್ತಿಯೊಬ್ಬ ಆಕೆಯ ಡ್ಯಾನ್ಸ್ ಅನ್ನು ಅನುಕರಣೆ ಮಾಡುತ್ತ ಕುಣಿಯುತ್ತಿರುವುದು!

ಟ್ವೀಟರ್ ನಲ್ಲಿ ಈ ವಿಡಿಯೋ 250K(2.50 ಲಕ್ಷ) ವೀಕ್ಷಣೆಯಾಗಿದ್ದು, ನೂರಾರು ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿಯ ಡ್ಯಾನ್ಸ್ ನೋಡಿ ನಗು ತಡೆಯಲಾಗುವುದಿಲ್ಲ ಎಂದು ಟ್ವೀಟರ್ ನಲ್ಲಿ ಒಬ್ಬರು ಕಮೆಂಟ್ ಹಾಕಿದ್ದು, ಮತ್ತೊಬ್ಬರು ಯುವತಿಗಿಂತ ಈ ವ್ಯಕ್ತಿಯೇ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾನೆ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next