Advertisement

UP: ಅಯೋಧ್ಯೆಯ ಪವಿತ್ರ ಕೊಳದಲ್ಲಿ ಬೋಲ್ಡ್‌ ಆಗಿ ಸೊಂಟ ಬಳುಕಿಸಿ ರೀಲ್ಸ್‌ ಮಾಡಿದ ಮಹಿಳೆ

04:49 PM Oct 10, 2023 | Team Udayavani |

ಲಕ್ನೋ: ಇತ್ತೀಚಿನ ದಿನಗಳಲ್ಲಿ ರೀಲ್ಸ್‌ ಮಾಡುವ ಹುಚ್ಚಾಟ ಎಲ್ಲೆಡೆ ಹೆಚ್ಚಾಗಿದೆ. ಈ ಹುಚ್ಚಾಟದಿಂದ ಎಷ್ಟೋ ಬಾರಿ ಪ್ರಾಣಕ್ಕೆ ಹಾನಿ ಆಗುವಂತ ಘಟನೆಗಳು ನಡೆಯುತ್ತವೆ. ಆದರೂ ಇಂಥದ್ದು ನಡೆಯುವುದು ಕಮ್ಮಿ ಆಗುತ್ತಲೇ ಇಲ್ಲ.

Advertisement

ಮಹಿಳೆಯೊಬ್ಬರು ರೀಲ್ಸ್‌ ಮಾಡಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದರ ಜೊತೆಗೆ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿ ಘಾಟ್‌ನಲ್ಲಿರುವ ಅಯೋಧ್ಯೆಯ ಪವಿತ್ರ ಕೊಳದಲ್ಲಿ ನಿಂತುಕೊಂಡು ಮಹಿಳೆಯೊಬ್ಬರು ಬಾಲಿವುಡ್‌ ಹಾಡೊಂದಕ್ಕೆ ರೀಲ್ಸ್‌ ಮಾಡಿರುವುದು ವೈರಲ್‌ ಆಗಿದೆ.

ಈ ರಾಮ್ ಕಿ ಪೈಡಿ ಘಾಟ್‌ ನಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಇಂತಹ ಪವಿತ್ರ ಕೊಳದಲ್ಲಿ ಮಹಿಳೆಯೊಬ್ಬರು ಬಾಬಿ ಡಿಯೋಲ್-ರಾಣಿ ಮುಖರ್ಜಿ ‘ಜೀವನ್ ಮೇ ಜಾನೆ ಜಾನಾ’ ಎನ್ನುವ ಹಾಡಿಗೆ ಬೋಲ್ಡ್‌ ಆಗಿ ಸೊಂಟ ಬಳುಕಿಸಿ ರೀಲ್ಸ್‌ ಮಾಡಿದ್ದಾರೆ.

ಸದ್ಯ ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ವೈರಲ್‌ ವಿಡಿಯೋ ನೋಡಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟ್ವೀಟ್‌ ನಲ್ಲಿ ಹೇಳಿದ್ದಾರೆ.

Advertisement

ಈ ವರ್ಷದ ಆರಂಭದಲ್ಲಿ, ಜೂನ್‌ನಲ್ಲಿ, ಅಯೋಧ್ಯೆಯ ಸರಯೂ ನದಿ ಘಾಟ್‌ನಿಂದ ಇದೇ ರೀತಿಯ ಘಟನೆ ನಡೆದಿತ್ತು. ʼಪಾನಿ ಮೇ ಆಗ್ ಲಗಾನಿ ಹೈ’ ಹಾಡಿಗೆ ಹುಡುಗಿಯೊಬ್ಬಳು ಕುಣಿಯುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next