ತಿರುವನಂತಪುರಂ: ಕೋವಿಡ್-19 ಕಾರಣದಿಂದ ದೇಶ ಲಾಕ್ ಡೌನ್ ಬಹುತೇಕರು ಕುಟುಂಬದೊಂದಿಗೆ ಕಾಲಕಳೆದರು. ಕೆಲವರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ಲಾಕ್ ಡೌನ್ ಸಮಯವನ್ನು ಉಪಯುಕ್ತವಾಗಿ ಕಳೆಯುವ ಪ್ರಯತ್ನ ಮಾಡಿದ್ದರು. ಆದರೆ ಇಲ್ಲೊಬ್ಬರು ಯುವತಿ ಲಾಕ್ ಡೌನ್ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡಿದ್ದಾರೆ. ಅಂದರೆ ಮೂರು ತಿಂಗಳ ಅವಧಿಯಲ್ಲಿ 350 ಕೋರ್ಸ್ ಗಳನ್ನು ಪೂರ್ಣಗೊಳಿಸಿದ್ದಾರೆ.
ಕೇರಳ ರಾಜ್ಯದ ಕೊಚ್ಚಿನ್ ನ ಆರತಿ ರೆಘುನಾಥ್ ಈ ಸಾಧನೆ ಮಾಡಿದ ಯುವತಿ. ದ್ವಿತೀಯ ವರ್ಷದ ಎಂಎಸ್ ಸಿ ಬಯೋಕೆಮಿಸ್ಟ್ರಿ ಪದವಿ ಕಲಿಯುತ್ತಿರುವ ಆರತಿ ಮೂರು ತಿಂಗಳಲ್ಲಿ 350 ಆನ್ ಲೈನ್ ಕೋರ್ಸುಗಳನ್ನು ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?
ಆನ್ ಲೈನ್ ಕೋರ್ಸ್ ಗಳ ಬಗ್ಗೆ ಕಾಲೇಜು ಉಪನ್ಯಾಸಕರಿಂದ ತಿಳಿದುಕೊಂಡಿದ್ದೆ. ಬಹಳಷ್ಟು ವಿಭಾಗದ ಕೋರ್ಸುಗಳಿವೆ. ಬೇರೆ ಅವಧಿಯ, ಬೇರೆ ಬೇರೆ ಪಠ್ಯಕ್ರಮದ ಕೋರ್ಸುಗಳಿವೆ. ಆದರೆ ಉಪನ್ಯಾಸಕರ ಸಹಾಯದಿಂದ ಅವುಗಳನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಆರತಿ ಹೇಳಿಕೊಂಡಿದ್ದಾರೆ.
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಜಾನ್ ಹಾಕಿನ್ಸ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ವರ್ಜೀನಿಯಾ, ಯುನಿವರ್ಸಿಟಿ ಆಫ್ ಕೊಲೊರಾಡೋ ಬೌಲ್ಡರ್, ಯುನಿವರ್ಸಿಟಿ ಆಫ್ ನ್ಯೂಯಾರ್ಕ್, ಯುನಿವರ್ಸಿಟಿ ಆಫ್ ಡೆನ್ಮಾರ್ಕ್, ಯುನಿವರ್ಸಿಟಿ ಆಫ್ ಕೋಪನ್ ಹೆಗನ್ ಗಳ ಕೋರ್ಸುಗಳನ್ನು ಆರತಿ ಪೂರ್ಣಗೊಳಿಸಿದ್ದು, ವಿಶ್ವದಾಖಲೆ ಬರೆದಿದ್ದಾರೆ.