Advertisement

Woman Biker: ನಿಯಮ ಉಲ್ಲಂಘನೆ, ತಪ್ಪು ಮಾಡಿಯೂ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಯುವತಿ

11:03 AM Sep 25, 2023 | Team Udayavani |

ಮುಂಬೈ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ಬೈಕ್ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ಈ ವಿಡಿಯೋ ಸೆಪ್ಟೆಂಬರ್ 15 ರಂದು ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ನಡೆದ ಘಟನೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನೂಪುರ್ ಪಟೇಲ್ ಎಂಬ 26 ವರ್ಷದ ಮಹಿಳೆ ಮಧ್ಯಪ್ರದೇಶದ ಜಬಲ್‌ಪುರ ನಿವಾಸಿಯಾಗಿದ್ದು, ತನ್ನ ಸಹೋದರನನ್ನು ಭೇಟಿಯಾಗಲು ಪುಣೆಗೆ ತೆರಳಿದ್ದಳು. ಅಲ್ಲಿ ಆಕೆ ವರ್ಲಿಯಲ್ಲಿರುವ ಸೀ ಲಿಂಕ್ ಅನ್ನು ನೋಡಲು ಬಯಸಿದ್ದಳು, ಆದ್ದರಿಂದ ಆಕೆ ಮುಂಬೈಗೆ ಪ್ರಯಾಣಿಸಲು ತನ್ನ ಸಹೋದರನ ಮೋಟಾರ್ ಸೈಕಲ್ ಅನ್ನು ತೆಗೆದುಕೊಂಡು ಹೊರಟಿದ್ದಾಳೆ.

ವಿಷಯವೇನೆಂದರೆ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ಬೈಕಿಂಗ್‌ಗೆ ಅವಕಾಶವಿಲ್ಲ, ಆದರೆ ನೂಪುರ್ ಗೆ ಈ ವಿಚಾರ ತಿಳಿಯದೆ ಸಮುದ್ರ ಸೇತುವೆಯ ಮೇಲೆ ಬೈಕ್ ಸವಾರಿಗೆ ಮುಂದಾಗಿದ್ದಾಳೆ. ಈ ವೇಳೆ ಮಹಿಳೆಯನ್ನು ಟ್ರಾಫಿಕ್ ಪೊಲೀಸರು ತಡೆದಿದ್ದಾರೆ ಇದರಿಂದ ಕುಪಿತಗೊಂಡ ಮಹಿಳೆ ಟ್ರಾಫಿಕ್ ಪೊಲೀಸ್ ಗೆ ಮನಬಂದಂತೆ ಅವಾಜ್ ಹಾಕಿದ್ದಾಳೆ. ಮಹಿಳೆ ಮಾಡಿರುವ ತಪ್ಪನ್ನು ಪೊಲೀಸರು ಬಿಡಿಸಿ ಹೇಳಿದರೂ ಅದನ್ನು ಒಪ್ಪದ ಮಹಿಳೆ ಪೊಲೀಸರಿಗೆ ಗದರಿದ್ದಾಳೆ.

 

Advertisement

ನೂಪುರ್ ಈ ನಗರಕ್ಕೆ ಹೊಸಬರು ಇಲ್ಲಿನ ರಸ್ತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಮತ್ತು ಸೀ ಲಿಂಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿದಿರಲಿಲ್ಲ. ಆದರೆ, ಸೀ ಲಿಂಕ್‌ನ ಪ್ರವೇಶ ದ್ವಾರದಲ್ಲಿರುವ ಸೂಚನಾ ಫಲಕವನ್ನೂ ಆಕೆ ನಿರ್ಲಕ್ಷಿಸಿದ್ದಾರೆ. ನೂಪುರ್ ಬೈಕ್ ಚಲಾಯಿಸುತ್ತಿರುವುದನ್ನು ಗಮನಿಸಿದ ಪೊಲೀಸರು ತಡೆದಿದ್ದಾರೆ ಈ ವೇಳೆ ಕುಪಿತಗೊಂಡ ಮಹಿಳೆ ಟ್ರಾಫಿಕ್ ಪೊಲೀಸರಿಗೆ ಮನಬಂದಂತೆ ಬೈದಿದ್ದಾಳೆ ಅಲ್ಲದೆ ಬೈಯುವ ಭರದಲ್ಲಿ ಪೊಲೀಸರ ಕೈಯನ್ನೇ ಕತ್ತರಿಸುವುದಾಗಿ ಹೇಳಿಕೊಂಡಿದ್ದಾಳೆ, ಈ ವೇಳೆ ಪೊಲೀಸ್ ಅಧಿಕಾರಿಗಳು ನೂಪುರ್ ಅವರ ಲೈಸೆನ್ಸ್ ಮತ್ತು ವಾಹನ ದಾಖಲೆಗಳನ್ನು ಕೇಳಿದಾಗ, ಅದಕ್ಕೂ ಸಹಕರಿಸಲಿಲ್ಲ, ಬಳಿಕ ಠಾಣೆಗೆ ಬರುವಂತೆ ಹೇಳಿದಾಗ ಅದಕ್ಕೂ ಒಪ್ಪದೆ ಅಸಭ್ಯವಾಗಿ ವರ್ತಿಸಿದ್ದಾಳೆ ಈ ವೇಳೆ ಸ್ಥಳಕ್ಕೆ ಮಹಿಳಾ ಸಿಬ್ಬಂದಿಯನ್ನು ಕರೆಸಿ ಬಳಿಕ ಠಾಣೆಗೆ ಕರೆದೊಯ್ದು ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Davanagere Bandh: ದಾವಣಗೆರೆ ಬಂದ್ ಗೆ ಅಭೂತಪೂರ್ವ ಬೆಂಬಲ… ಅಂಗಡಿ ಮುಂಗಟ್ಟು ಬಂದ್

Advertisement

Udayavani is now on Telegram. Click here to join our channel and stay updated with the latest news.

Next