Advertisement

ರಕ್ಕಸರು:ಹೆಣ್ಣು ಹೆತ್ತಿದ್ದಕ್ಕೆ ಮೈದುನನಿಂದ ಮಾರಣಾಂತಿಕ ಹಲ್ಲೆ !

12:39 PM Jul 15, 2017 | Team Udayavani |

ಪಟಿಯಾಲ: ಮೃಗೀಯ ವರ್ತನೆಗೆ ಸಾಕ್ಷಿಯಾಗಿ ಹೆಣ್ಣು ಹೆತ್ತಿದ್ದಕ್ಕೆ ಹಸಿ ಬಾಣಂತಿಯೊಬ್ಬಳ ಮೇಲೆ ಆಕೆಯ ಮೈದುನ ಮತ್ತು ಸ್ನೇಹಿತ ಬಡಿಗೆಯಿಂದ ಅಮಾನವೀಯವಾಗಿ ಥಳಿಸಿದ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ ನಡೆದಿದೆ. ರಕ್ಕಸರಂತೆ ಬಾಣಂತಿಯನ್ನು ಥಳಿಸುವ ವಿಡಿಯೋ ಇದೀಗ ವೈರಲ್‌ ಆಗಿದೆ.

Advertisement

ಹೆಣ್ಣು ಹೆತ್ತಿದ್ದೀಯ ವರದಕ್ಷಿಣೆ ತರಬೇಕು ಎಂದು ಚಿತ್ರಹಿಂಸೆ ನೀಡಿ, ಬಡಿಗೆಗಳಿಂದ ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಬಡಿಗೆಯಿಂದ ಹೊಡೆಯುತ್ತಿರುವ ವೇಳೆ ಬಾಣಂತಿ ನೋವಿನಿಂದ ಚೀರುತ್ತಿರುವುದು ಎಂಥಹವರಿಗೂ ನೋವು ತರುವಂತಿದೆ. ಹೊಡೆಯುತ್ತಿರವವರ ವಿರುದ್ಧ ಸಿಟ್ಟು ನೆತ್ತಿಗೇರುವಂತಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. 

ಮೀನಾ ಕಶ್ಯಪ್‌ ಎಂಬ ಮಹಿಳೆಗೆ ಥಳಿಸಲಾಗಿದ್ದು , ಹೆಣ್ಣು ಹೆತ್ತ ಕಾರಣಕ್ಕೆ ಆಕೆಯನ್ನು  ಪತಿ ದಲ್‌ಜೀತ್‌ ಸಿಂಗ್‌ ತೊರೆದಿದ್ದ. ಆತನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next