Advertisement

ಜಿಮ್‌ನಲ್ಲಿ ಮಹಿಳೆ ಸಾವು ಹೃದಯಾಘಾತದಿಂದ ಅಲ್ಲ: ಅಸಲಿ ಕಾರಣ ಬಯಲು

03:40 PM Apr 05, 2022 | Team Udayavani |

ಬೆಂಗಳೂರು: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದ ಜಿ.ಎಂ.ಪಾಳ್ಯ ನಿವಾಸಿ ವಿನಯಾ ವಿಠಲ್‌(35) ಸಾವಿಗೆ, ಮೆದುಳಿನ ರಕ್ತ ನಾಳ ಸಮಸ್ಯೆಯೇ ಕಾರಣ ಎಂದು ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.

Advertisement

ಮಾ.26 ರಂದು ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಲ್ಲೇಶ್‌ ಪಾಳ್ಯದ ಜೀಮ್‌ನಲ್ಲಿ ವಿನಯಾ ವಿಠಲ್‌ ವರ್ಕ್‌ಔಟ್‌ ಮಾಡುವಾಗ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಗಾಗಿ ಸಿ.ವಿ.ರಾಮನ್‌ ಆಸ್ಪತ್ರೆಗೆ ರವಾನಿಸಲಾಗಿತ್ತು.

ಮಹಿಳೆ ಸಾವಿಗೆ ಹೃದಯಾಘಾತ ಕಾರಣವಿರಬೇಕು ಎಂದು ಶಂಕಿಸಲಾಗಿತ್ತು. ಆದರೆ, ಇದೀಗ ಬಂದಿರುವ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಿನಯಾ ವಿಠಲ್‌ ಅವರಿಗೆ ರಕ್ತದ ಒತ್ತಡ ಉಂಟಾಗಿ ಮೆದುಳಿನ ರಕ್ತನಾಳಗಳು ಒಡೆದು, ಸೆರೆಬ್ರಲ್‌ ಹೆಮರೇಜ್‌ ಉಂಟಾಗಿ ರಕ್ತಸ್ರಾವವಾಗಿ ಕೋಮಾ ಸ್ಥಿತಿಗೆ ತಲುಪಿ ಮೃತಪಟ್ಟಿದ್ದಾರೆ.  ಭಾರವಾದ ವಸ್ತುಗಳನ್ನು ಎತ್ತುವಾಗ ಈ ರೀತಿಯ ರಕ್ತದ ಒತ್ತಡ ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೆದ್‌ ಹೇಳಿದರು.

ಮಂಗಳೂರು ಮೂಲದ ವಿನಯಾ ವಿಠಲ್‌, ನಗರದಲ್ಲಿ ಐಡಿಸಿ ಕಂಪನಿಯಲ್ಲಿ ಬ್ಯಾಗ್‌ಗ್ರೌಂಡ್‌ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದರು. ಜಿ.ಎಂ. ಪಾಳ್ಯದಲ್ಲಿ ಒಬ್ಬರೇ ವಾಸವಾಗಿದ್ದರು. ಮಾ.25ರಂದು ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಮಾ.26ರಂದು ಬೆಳಗ್ಗೆ ಎಂದಿನಂತೆ ಜಿಮ್‌ನಲ್ಲಿ ದೈಹಿಕ ಕಸರತ್ತು ನಡೆಸುವಾಗ ದುರ್ಘ‌ಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next