ಮಡಿಕೇರಿ: ಬಸ್ ಹತ್ತುತ್ತಿದ್ದ ಪ್ರಯಾಣಿಕರ ಕುತ್ತಿಗೆ ಯಲ್ಲಿದ್ದ ಚಿನ್ನದ ಸರವನ್ನು ಕದಿಯು ತ್ತಿದ್ದ ಮಹಿಳೆಯನ್ನು ಸಾರ್ವಜನಿಕರ ಸಹಕಾರದಿಂದ ಕುಶಾಲ ನಗರ ಪೊಲೀಸರು ಬಂಧಿಸಿದ್ದಾರೆ. ಆಕೆ ಯಿಂದ ಸುಮಾರು 1 ಲ.ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿ ಕೊಳ್ಳಲಾಗಿದೆ.
ಬಂಧಿತಳನ್ನು ತಮಿಳುನಾಡು ಸೇಲಂ ನಿವಾಸಿ ಕೆ. ಲಕ್ಷ್ಮೀ (30) ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ 12.15ರ ಸುಮಾ ರಿಗೆ ಕುಶಾಲನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರತ್ನಮ್ಮ ಹಾಗೂ ಆಕೆಯ ಪುತ್ರಿ ಸುನೀತಾ ಅವರು ಚಿಕ್ಕಮಗಳೂರು ಕಡೆಗೆ ಹೋಗುವ ಬಸ್ ಹತ್ತುತ್ತಿದ್ದಾಗ ಒಬ್ಬ ಮಹಿಳೆ ರತ್ನಮ್ಮ ಅವರ ಕುತ್ತಿಗೆಯಲ್ಲಿದ್ದ ಅಂದಾಜು 30 ಗ್ರಾಂ. ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾದಳು.
ಈ ಸಂದರ್ಭ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಸಾರ್ವ ಜನಿಕರ ಸಹಕಾರದಿಂದ ಆ ಮಹಿಳೆ ಯನ್ನು ಚಿನ್ನದ ಸರ ಸಹಿತ ವಶಕ್ಕೆ ಪಡೆದುಕೊಂಡರು.
ಆಕೆಯ ವಿರುದ್ಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಬೀದಿ ಬದಿಯಲ್ಲಿ ಪ್ಲಾಸ್ಟಿಕ್ ವ್ಯಾಪಾರ ಮಾಡುತ್ತಿದ್ದಳೆಂದು ತಿಳಿದು ಬಂದಿದೆ. ಡಿವೈಎಸ್‌ಪಿ ದಿನಕರ ಶೆಟ್ಟಿ ಹಾಗೂ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಐ ಜಗದೀಶ್, ಅಪರಾಧ ಪತ್ತೆ ದಳದ ಉಮೇಶ್, ಜಯಪ್ರಕಾಶ್, ರವೀಂದ್ರ, ಜೋಸೆಫ್, ಸುಧೀಶ್ ಕುಮಾರ್, ನಿಶಾ, ರಶ್ಮಿ, ಹರ್ಷಾವತಿ, ಶ್ವೇತಾ, ಚಾಲಕರಾದ ಗಣೇಶ್ ಮತ್ತು ಪ್ರವೀಣ್ ಅವರು ಭಾಗವಹಿಸಿದ್ದರು.