ಮುಂಬೈ: ಇಲ್ಲಿನ ಮೀರಾ ಭಯಂದರ್ ಪ್ರದೇಶದ ಅಪಾರ್ಟ್ ಮೆಂಟ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಮೀರಾ ಭಯಂದರ್ ವಸೈ ವಿರಾರ್ ನ ಮಾನವ ಕಳ್ಳಸಾಗಣೆ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಒಂದು ವೇಳೆ Delhi Capitals ನಾಯಕತ್ವ ಕೊಡುತ್ತಿದ್ದರೂ ನಾನು ಬೇಡ ಎನ್ನುತ್ತಿದ್ದೆ: ಅಕ್ಷರ್
ಈಕೆಯ ದಂಧೆಗೆ ಕಾಲೇಜು ಯುವತಿಯರೇ ಮುಖ್ಯ ಗುರಿಯಾಗಿದ್ದು, ದಾಳಿಯ ವೇಳೆ ರಕ್ಷಿಸಲ್ಪಟ್ಟ ಕಾಲೇಜು ವಿದ್ಯಾರ್ಥಿನಿಯರನ್ನು ಕಾಂದಿವಲಿಯ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಸೈರಾ ಶೇಕ್ ಅಲಿಯಾಸ್ ದಿವ್ಯ ಮಂಗಲ್ಕರ್ ಎಂದು ಗುರುತಿಸಲಾಗಿದೆ. ಸುಲಭವಾಗಿ ಹಣಗಳಿಸುವ ಆಮೀಷವೊಡ್ಡಿ ಕಾಲೇಜು ಯುವತಿಯರನ್ನು ತನ್ನ ದಂಧೆಗೆ ಬಳಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎನ್ ಜಿಒ ನೀಡಿರುವ ಮಾಹಿತಿ ಮೇರೆಗೆ ಎಸ್ ಎಸ್ ಐ ಉಮೇಶ್ ಪಾಟೀಲ್ ನೇತೃತ್ವದ ತಂಡ ಗ್ರಾಹಕರಂತೆ ವರ್ತಿಸಿ ಮಹಿಳೆಯ ಸಂಪರ್ಕ ಸಾಧಿಸಿತ್ತು. ನಂತರ ಭಾಯಂದರ್ (ಪೂರ್ವ)ದ ನ್ಯೂ ಗೋಲ್ಡನ್ ನೆಸ್ಟ್ ಪ್ರದೇಶದಲ್ಲಿನ ಮಹಿಳೆಯ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಬಂಧಿತ ಮಹಿಳೆ ದಿವ್ಯಾ ವಿರುದ್ಧ ಐಪಿಸಿ ಸೆಕ್ಷನ್ 370ರ ಅಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.