Advertisement

Women; 16 ವರ್ಷಗಳಿಂದ ಮನೆಯಲ್ಲೇ ಮಹಿಳೆ ಬಂಧನ: ರಕ್ಷಣೆ

01:48 AM Oct 07, 2024 | Team Udayavani |

ಭೋಪಾಲ್‌: ಸುಮಾರು 16 ವರ್ಷಗಳಿಂದ ತನ್ನ ಪತಿ ಹಾಗೂ ಅವನ ಕುಟುಂಬಸ್ಥರಿಂದ ಶೋಷಣೆಗೊಳಗಾಗಿದ್ದ ಹಾಗೂ ಒತ್ತೆಯಾಳಾಗಿ, ಮನೆಯಲ್ಲೇ ಬಂಧಿಯಾಗಿದ್ದ ಮಹಿ ಳೆಯೊಬ್ಬಳನ್ನು ಭೋಪಾಲ್‌ನಲ್ಲಿ ರಕ್ಷಿಸಲಾಗಿದೆ. ರಾಣು ಸಾಹು ಎಂಬಾಕೆ 2006ರಲ್ಲಿ ವಿವಾಹವಾಗಿದ್ದು, ಆಕೆಯ ಪತಿಯ ಕುಟುಂಬದವರು 2008ರಿಂದಲೂ ಆಕೆ ತವರು ಸಂಪರ್ಕಿಸದಂತೆ ತಡೆದಿದ್ದರು. ಇತ್ತೀಚೆಗೆ ನೆರೆಹೊರೆಯವರು ಆಕೆಯ ಆರೋಗ್ಯ ಹದಗೆಡುತ್ತಿರುವ ಬಗ್ಗೆ ರಾಣು ತಂದೆಗೆ ಮಾಹಿತಿ ನೀಡಿದ ಮೇರೆಗೆ ಆಕೆಯ ತಂದೆ ದೂರು ನೀಡಿದ್ದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next