ಮುಂಬಯಿ : ಶಿವಸೇನೆಯ ಲೋಕಸಭಾ ಸಂಸದ ರಾಹುಲ್ ಶೆವಾಲೆ ವಿರುದ್ಧ 26 ವರ್ಷದ ಮಹಿಳೆಯೊಬ್ಬರು ಗುರುವಾರ ಅತ್ಯಾಚಾರ ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಉಪನಗರದಲ್ಲಿರುವ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಶೆವಾಲೆ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ದೂರಿನ ಕುರಿತು ಪೊಲೀಸರು ಇನ್ನೂ ತನಿಖೆಯನ್ನು ಪ್ರಾರಂಭಿಸಿಲ್ಲ. ಇದೆ ವೇಳೆ ಸಂಸದ ರಾಹುಲ್ ಶೆವಾಲೆ ಆರೋಪವನ್ನು ನಿರಾಕರಿಸಿದ್ದಾರೆ.
ಅತ್ಯಾಚಾರದ ಆರೋಪವನ್ನು ನಿರಾಕರಿಸುವ ಹೇಳಿಕೆಯನ್ನು 49 ರ ಹರೆಯದ ಸಂಸದ ಶೆವಾಲೆ ಬಿಡುಗಡೆ ಮಾಡಿದ್ದು, ದೂರನ್ನು ತಮ್ಮ ರಾಜಕೀಯ ಇಮೇಜ್ ಅನ್ನು ಹಾಳುಮಾಡುವ ಉದ್ದೇಶದ ಪಿತೂರಿ ಎಂದು ಬಣ್ಣಿಸಿದ್ದಾರೆ.
ಮುಂಬೈ ಸೌತ್ ಸೆಂಟ್ರಲ್‌ನ ಸಂಸದ ಯಾವುದೇ ಪೊಲೀಸ್ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ ಮತ್ತು ಪಿತೂರಿಯ ಹಿಂದಿರುವ ಜನರನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.