Advertisement

ಕಮ್ಮನಹಳ್ಳಿಯಲ್ಲಿ ಯುವತಿಗೆ ಕಿರುಕುಳ: ಹಲವರ ವಿಚಾರಣೆ; ಓರ್ವ ಸೆರೆ?

01:39 PM Jan 04, 2017 | Team Udayavani |

ಬೆಂಗಳೂರು: ನಗರದ ಕಮ್ಮನಹಳ್ಳಿಯಲ್ಲಿ ಡಿಸೆಂಬರ್‌ 31 ರ ರಾತ್ರಿ ಯುವತಿಯೊಬ್ಬಳನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಸಿಸಿಟಿವಿ ದೃಶ್ಯಾವಳಿ ರಾಷ್ಟ್ರವ್ಯಾಪಿ ಪ್ರಸಾರವಾಗಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಾಣಸವಾಡಿ ಪೊಲೀಸರು ಬುಧವಾರ  12ಕ್ಕೂ ಹೆಚ್ಚು ಮಂದಿ ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. 

Advertisement

ಭಾರೀ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಇಬ್ಬರು ಅಪರಿಚಿತರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದಿರುವ ಪೈಕಿ ಓರ್ವ ಆರೋಪಿ ಸೇರಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಅಮಾಯಕರನ್ನು ವಶಕ್ಕೆ ಪಡೆದರೆ ಪೊಲೀಸರು?
ಕಮ್ಮನ್ನಹಳ್ಳಿ ಪ್ರದೇಶದ ನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಾಣಸವಾಡಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.ಯುವಕರನ್ನು ಕರೆತರುತ್ತಿದ್ದಂತೆ ಆತಂಕಿತರಾದ ಅವರ ತಾಯಂದಿರು , ಸಹೋದರಿಯರು ಮತ್ತು ಸಂಬಂಧಿಕರು ಠಾಣೆಯ ಎದುರು ಬಂದು ನಮ್ಮ ಮಕ್ಕಳು ಅಮಾಯಕರು ಅವರನ್ನು ಬಿಟ್ಟು ಬಿಡಿ ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿ  ಹೆಣ್ಣೂರು ಠಾಣೆ ಇನ್ಸ್‌ಪೆಕ್ಟರ್‌ ಪಿ.ಶ್ರೀನಿವಾಸ್‌ ಅವರು ನೀಡಿದ ದೂರಿನಂತೆ ಕೇಸು ದಾಖಲಿಸಿಕೊಳ್ಳಲಾಗಿದೆ. 

ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆಗೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಕಾಮುಕರಿಗೆ  ಇನ್ನೆರಡು ಬೈಕ್‌ಗಳಲ್ಲಿದ್ದ ನಾಲ್ಕು ಮಂದಿ ಕಾಮುಕರು ನೀಚ ಕೃತ್ಯಕ್ಕೆ ಸಾಥ್‌ ನೀಡಿರುವ ಬಗ್ಗೆ ಕಂಡು ಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next