Advertisement

ಇಬ್ಬರು ಕಾಮಾಂಧರಿಂದ ಮಹಿಳೆಯ ಅಪಹರಣ, ಅತ್ಯಾಚಾರ

11:04 AM Feb 11, 2019 | udayavani editorial |

ಮುಜಫ‌ರನಗರ, UP: ಇಬ್ಬರು ಕಾಮಾಂಧ ಪುರುಷರು 26ರ ಹರೆಯದ ತರುಣಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಕೋತ್ವಾಲಿ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ಇಂದು ಸೋಮವಾರ ತಿಳಿಸಿದ್ದಾರೆ. 

Advertisement

ತರುಣಿಯು ಹಾಡುಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಆಕೆಯ ಮೇಲೆ ಮುಗಿಬಿದ್ದು ಅಪಹರಿಸಿ ಒಯ್ದು ಅತ್ಯಾಚಾರ ನಡೆಸಿದರು ಎಂದು ಎಸ್‌ಎಚ್‌ಓ ಅನಿಲ್‌ ಕುಮಾರ್‌ ತಿಳಿಸಿದರು. 

ಪೊಲೀಸರು ಪ್ರಕರಣದ ಬಗ್ಗೆ  ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ತಲೆಮರೆಸಿಕೊಂಡಿರುವ ಅತ್ಯಾಚಾರಿಗಳಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next