ವಡಗೇರಾ: ಅಭಿವೃದ್ಧಿ ಕಾಮಗಾರಿಗಾಗಿ ಸರಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಕಳಪೆ ಕಾಮಗಾರಿಯಿಂದ ಒಂದು ಹನಿ ಕುಡಿಯುವ ನೀರು ಬಡಾವಣೆ ನಿವಾಸಿಗಳಿಗೆ ಸಿಗುತ್ತಿಲ್ಲ ಎಂಬುವುದಕ್ಕೆ ಪಟ್ಟಣದ ಮೂರು ಮತ್ತು ನಾಲ್ಕನೇ ವಾರ್ಡ್ ಸಾಕ್ಷಿಯಾಗಿವೆ.
ಪಟ್ಟಣದ ವಾರ್ಡ್ ಸಂಖ್ಯೆ ಮೂರು ಮತ್ತು ನಾಲ್ಕರ ಬಡಾವಣೆ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲು ಆಗ್ರಹಿಸಿ ಸಾಕಷ್ಟು ಬಾರಿ ಆಗಿನ ಜಿಲ್ಲಾ ಧಿಕಾರಿ ಆಗಿದ್ದ ಮನೋಜ ಜೈನ್ ಅವರಿಗೆ ಮನವಿ ಸಲ್ಲಿಸಿದ್ದರು. ಅವರು ಸರಕಾರದ ಗಮನಕ್ಕೆ ತಂದು ರಾಷ್ಟೀಯ ಗ್ರಾಮೀಣ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಸುಮಾರು 30 ಲಕ್ಷ ರೂ., ವೆಚ್ಚದಲ್ಲಿ ಪೈಪ್‌ಲೈನ್ ಮುಖಾಂತರ ಕುಡಿಯುವ ನೀರಿನ್ನು ಸರಬರಾಜು ಮಾಡಲು ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ನೀಡಿದ್ದರು. ಆದರೆ ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿವೆ.
ಬಡಾವಣೆಗೆ ಸರಬರಾಜು ಮಾಡಲು ಅಳವಡಿಸಿರುವ ಪೈಪ್‌ಗ್ಳು ಅಲ್ಲಲ್ಲಿ ಒಡೆದು ಹೋಗಿದ್ದು, ಕಾರಂಜಿಯಂತೆ ನೀರು ಚಿಮ್ಮುತ್ತಿದ್ದು, ಬಡಾವಣೆ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಸುಮರು 30 ಲಕ್ಷ ರೂ., ವೆಚ್ಚದಲ್ಲಿ ಮಾಡಿರುವ ಈ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಜೊತೆಗೆ ಅಧಿ ಕಾರಿಗಳು ಸಹ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಮೇಲಧಿಕಾರಿಗಳು ಈ ಕಾಮಗಾರಿಯ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.
ಪೈಪ್ ಮುಖಾಂತರ ಸರಬರಾಜು ಆಗುವ ನೀರಿನ್ನು ನಿಲ್ಲಿಸಿ, ಎಲ್ಲಿ ಪೈಪ್‌ಗ್ಳು ಒಡೆದು ಹೋಗಿವೆ ಎಂಬುವುದನ್ನು ಪರಿಶೀಲಿಸಿ ಶೀಘ್ರ ರಿಪೇರಿ ಮಾಡಲಾಗುವುದು. ಶರಣಪ್ಪ, ಜೆಇ ಪೈಪ್‌ಲೈನ್ ಕಾಮಗಾರಿಯಲ್ಲಿ ಬಹಳಷ್ಟು ಅವ್ಯವಹಾರ ನಡೆದಿದ್ದು, ಕಳಪೆ ಕಾಮಗಾರಿ ಕೂಡ ಕಂಡು ಬಂದಿದ್ದು, ಮೇಲಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಗುರು ನಾಟೇಕಾರ, ಬಡಾವಣೆ ನಿವಾಸಿ