Advertisement

ಗಡಿಯಲ್ಲಿ ಭಾರತೀಯ ಸೈನಿಕರ ಪ್ರತಿ ದಾಳಿ;ಇಬ್ಬರು ಪಾಕ್‌ ಸೈನಿಕರು ಬಲಿ

09:27 AM Jun 15, 2017 | |

ಜಮ್ಮು : ಗಡಿ  ನಿಯಂತ್ರಣ ರೇಖೆಯಲ್ಲಿ  ಉಪಟಳ ಮುಂದುವರಿಸಿರುವ ಪಾಕಿಸ್ತಾನಕ್ಕೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದು, ಗುರುವಾರ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಪಾಕ್‌ ಸೈನಿಕರು ಹತ್ಯೆಗೀಡಗಿದ್ದಾರೆ. 

Advertisement

ರಜೌರಿ ಮತ್ತು ಪೂಂಚ್‌ ಸೆಕ್ಟರ್‌ನಲ್ಲಿ ಪಾಕ್‌ ಪಡೆಗಳು ಅಪ್ರಚೋದಿತ ಮೋರ್ಟಾರ್‌ ಶೆಲ್‌ ಮತ್ತು ಭಾರೀ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಭಾರತೀಯ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿವೆ.

ನಾಲ್ಕು ದಿನಗಳ ಒಳಗೆ 10 ಬಾರಿ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಪಾಕ್‌ ಉದ್ಧಟತನ ತೋರಿದೆ. 

 ಪಾಕ್‌ ಬೆಂಬಲಿತ ಉಗ್ರರು ಬುಧವಾರ ಗಡಿ ಪ್ರದೇಶದ 6 ಕಡೆಗಳಲ್ಲಿ ಗಡಿ ಭದ್ರತಾ ದಳದ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 13 ಮಂದಿ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next