Advertisement

ಏನ್‌ ಹುಚ್ಚಾಟ;ಕುಡಿದ ಮತ್ತಿನಲ್ಲಿ ಪ್ರಪಾತಕ್ಕೆ ಹಾರಿದ ಯುವಕರು;ವಿಡಿಯೋ

05:13 PM Aug 03, 2017 | Team Udayavani |

 ಮುಂಬಯಿ: ಕುಡಿದ ಮತ್ತಿನಲ್ಲಿ ಯುವಕರಿಬ್ಬರು ಅಂಬೋಲಿಯ ಪ್ರವಾಸಿ ಸ್ಥಳ ಕವಳೆ ಸಾದ್‌ ಪಾಯಿಂಟ್‌ನಲ್ಲಿ ಪ್ರಪಾತಕ್ಕೆ ಹಾರಿ ಸಾವನ್ನಪ್ಪಿರುವ ದೃಶ್ಯಗಳ ವಿಡಿಯೋ ಇದೀಗ ವೈರಲ್‌ ಆಗಿದೆ. 

Advertisement

ಗೆಳೆಯನ ಸವಾಲು ಸ್ವೀಕರಿಸಿ ಗಾಡಿಂಗ್‌ಲಾಜ್‌ ಎಂಬಲ್ಲಿನ ಇಮ್ರಾನ್‌ ಗರ್ಡಿ ಮತ್ತು ಪ್ರಸಾದ್‌ ರಾಠೊಡ್‌ ಎಂಬ ಯುವಕರು ಪ್ರಪಾತಕ್ಕೆ ಹಾರಿಯೇ ಬಿಟ್ಟಿದ್ದಾರೆ. ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಕೊನೆ ಕ್ಷಣದ ವಿಡಿಯೋ ಇದೀಗ ವೈರಲ್‌ ಆಗಿದೆ. 

ಜುಲೈ 31 ,ಸೋಮವಾರ ಈ ಘಟನೆ ನಡೆದಿದೆ. ತಡೆಗೋಡೆ ದಾಟಿ ಇಬ್ಬರು ಹಾರಿದ್ದು ಈ ವೇಳೆ ಜನರು ಬೊಬ್ಬಿಟ್ಟಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. 

ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆಯಾದ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next