Advertisement

ಕಾಮಾಲೆ-ಡೆಂಘೀ ಹರಡದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಮನವಿ

02:52 PM Jun 24, 2020 | Suhan S |

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕಾಮಾಲೆ ರೋಗ ಮತ್ತು ಡೆಂಘೀ ಜ್ವರದ ಕುರಿತು ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳಿಗೆ ನಗರದ ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಅರುಣಕುಮಾರ ಮೂಲಕ ಮಂಗಳವಾರ ಮನವಿ ಸಲ್ಲಿಸಲಾಯಿತು.

Advertisement

ಕಾಮಾಲೆ ರೊಗ ಸಾಂಕ್ರಾಮಿಕ  ರೋಗವಾಗಿದ್ದು, ಈಗಾಗಲೆ ನಗರದಲ್ಲಿ 200ಕ್ಕೂ ಹೆಚ್ಚು ಮಕ್ಕಳಿಗೆ ರೋಗ ಲಕ್ಷಣ ಕಂಡುಬಂದ ಮಾಹಿತಿ ಇದೆ. ನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಚರಂಡಿಗಳ ಸ್ವಚ್ಛತೆ, ಔಷಧಿಗಳ ಸಿಂಪಡಣೆಗೆ ನಗರದ ಆರೋಗ್ಯ ಇಲಾಖೆ ಹಾಗೂ ನಗರಸಭೆ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಗಿದೆ.

ಸಮಿತಿ ಅಧ್ಯಕ್ಷ ಅಕ್ರಂ ಖಾನ್‌, ಉಪಾಧ್ಯಕ್ಷ ಅಬ್ದುಲ್‌ ವಹಾಬ ಬಾನ್ಸಾರಿ, ಸದಸ್ಯರಾದ ವಕೀಲ ರಾಘವೇಂದ್ರ ಗಡೆಪ್ಪನವರ, ಬಾಬಾಸಾಬ ಜಮಾದಾರ, ಶಿವಾನಂದ ಗಗ್ಗರಿ, ಕನ್ನಡ ರಕ್ಷಣಾ ವೇದಿಕೆಯ ಸ್ಥಳೀಯ ಘಟಕದ ಅಧ್ಯಕ್ಷ ಪ್ರವೀಣ ಕೋಠಾರಿ, ಜಹಾಂಗೀರ ಸಾಬ, ಮಹಮ್ಮದ್‌ ಸನದಿ, ಗೌಸ್‌ ಯರಗಟ್ಟಿ, ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next