ಪಣಜಿ: ಗೋವಾ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿ ಫೆಬ್ರುವರಿ 14 ಕ್ಕೆ ಚುನಾವಣೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ರವರ ನೇತೃತ್ವವಿಲ್ಲದೆಯೇ ರಾಜ್ಯ ಬಿಜೆಪಿಯು ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದೆ.
ಬಿಜೆಪಿ ಸರ್ಕಾರ ಮರುಸ್ಥಾಪನೆಗೆ ಪಕ್ಷ ಯಾವ ಸಿದ್ಧತೆ ನಡೆಸಿದೆ, ಯಾವ ಮುಖಗಳಿಗೆ ಈ ಬಾರಿ ಬಹುಮತ ಸಿಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಗೋವಾದಲ್ಲಿ ಮನೋಹರ್ ಪರ್ರಿಕರ್ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ತಮ್ಮ ಜನಸಂಪರ್ಕ ಅಭಿಯಾನ ಮತ್ತು ಜನಸಾಮಾನ್ಯರನ್ನು ತಲುಪುವ ಸಾಮರ್ಥ್ಯದ ಮೂಲಕ ಬಿಜೆಪಿಯನ್ನು ಬಲಪಡಿಸುವಲ್ಲಿ ಪರೀಕರ್ ಪ್ರಮುಖ ಪಾತ್ರ ವಹಿಸಿದ್ದರು. ಇದರ ಫಲವಾಗಿ 2012 ರಲ್ಲಿ ಬಿಜೆಪಿ ಬಹುಮತ ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು.
ಪ್ರಸಕ್ತ ಬಾರಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದಲ್ಲಿ ಬಿಜೆಪಿ ವಿಧಾನಸಭಾ ಚುನಾಚವಣೆಯನ್ನು ಎದುರಿಸುತ್ತಿದ್ದು, ಬಿಜೆಪಿ ಈ ಬಾರಿ ಗೋವಾ ಚುನಾವಣೆಯಲ್ಲಿ ಉತ್ತಮ ಆಡಳಿತ, ಕ್ಷಿಪ್ರ ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲಗೊಂಡಿದ್ದರಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಿದೆ. ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಆಗಮನದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಿಗುತ್ತಿದ್ದ ಬಿಜೆಪಿ ವಿರೋಧಿ ಮತಗಳು ಈಗ ಮೂರು ಭಾಗವಾಗಿ ಒಡೆದುಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
2017 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಜನರ ಅಸಮಾಧಾನ ಬಯಲಿಗೆ ಬಂದಿತ್ತು. ಮನೋಹರ್ ಪರೀಕರ್ ರಾಜ್ಯದಿಂದ ದೂರವುಳಿದಿದ್ದರಿಂದ ಇದು ಸಂಭವಿಸಿತ್ತು ಎಂದೇ ಹೇಳಲಾಗುತ್ತಿದೆ. ಅಂದು ಬಿಜೆಪಿ 13 ಸ್ಥಾನ ಗೆದ್ದಿತ್ತು. ಕಾಂಗ್ರೇಸ್ 17 ಸ್ಥಾನ ಗೆದ್ದಿತ್ತು. ಆದರೆ ಸ್ಥಳೀಯ ಪಕ್ಷಗಳು ಮತ್ತು ಪಕ್ಷೇತರರಲ್ಲಿ ಮನೋಹರ್ ಪರೀಕರ್ ರವರ ಮೇಲಿನ ವಿಶ್ವಾಸದಿಂದಾಗಿ 2017 ತಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸ್ಥಾಪನೆಯಾಗಿತ್ತು.