ಹರಪನಹಳ್ಳಿ: ಜಗಳೂರು ವಿಧಾನಸಭಾ ಚುನಾವಣೆಯಲ್ಲಿ ಪರಿಶುದ್ಧ, ಪ್ರಮಾಣಿಕ ಚುನಾವಣೆ ನಡೆಸುವ ಸಂಕಲ್ಪ ನಮ್ಮದಾಗಿತ್ತು. ಅಭ್ಯರ್ಥಿಗಳು ಸಹಮತ ವ್ಯಕ್ತಪಡಿಸಿದರೂ ಮತದಾರರಲ್ಲಿ ಭಿನ್ನಾಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಸದ್ಯಕ್ಕೆ ನಮ್ಮ ನಿರ್ಧಾರ ಕೈಬಿಡಲಾಗಿದೆ ಎಂದು ತರಳಬಾಳು
ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಎನ್. ಶೀರನಹಳ್ಳಿ ಗ್ರಾಮದಲ್ಲಿ ರವಿವಾರ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ನೂತನ ಶಿಲಾವಿಗ್ರಹ ಪ್ರತಿಷ್ಠಾಪನಾ ಸಮಾರಂಭದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಜಗಳೂರಲ್ಲಿ ದೇಶದಲ್ಲೇ ಮಾದರಿ ಚುನಾವಣೆಯನ್ನು ನಡೆಸಬೇಕು ಎಂಬ ಸಂಕಲ್ಪ ಶ್ರೀಮಠ ಹೊಂದಿತ್ತು. ಅಭ್ಯರ್ಥಿಗಳು ನಮ್ಮ ಆಶಯಕ್ಕೆ ತಕ್ಕಂತೆ ನಡೆದುಕೊಂಡರು. ಆದರೆ ಕ್ಷೇತ್ರದ ಮತದಾರರು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಹಾಗಾಗಿ ನಮ್ಮ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಬ್ಯಾಂಕ್ ರಾಜ್ಯ ನಿರ್ದೇಶಕ ಜಿ.ನಂಜನಗೌಡ, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗುಂಡಗತ್ತಿ ಬಂದೋಳ್ ಮಂಜುನಾಥ ಮಾತನಾಡಿದರು. ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ಎಸ್. ರಾಜೇಂದ್ರಪ್ರಸಾದ್, ತಾಪಂ ಮಾಜಿ ಅಧ್ಯಕ್ಷ ಕಿತ್ತೂರು ಓಬಣ್ಣ, ವಕೀಲರಾದ ಎಸ್.ಎಂ. ನಾಗರಾಜ್, ಕರಿಯಪ್ಪ, ಮಾರುತಿ, ಆರ್.ಶಿವುಕುಮಾರ್, ರಾಮನಗೌಡ, ಕೆಂಚನಗೌಡ, ಪಾಟೇಲ್ ಪ್ರಕಾಶ, ಆರ್.ಲೀಲಾಮೂರ್ತಿ, ಕೆ.ಮಾರುತಿ, ಜಿ.ಬಸವರಾಜ್, ಕೆ.ರಂಗಪ್ಪ, ಎ.ಕೆ.ಮಾರುತೇಶ, ಎ.ಕೆ.ಬಸವರಾಜ್, ಎ.ಕೆ. ಹನುಮಂತ ಹಾಗೂ ಶಿವಸೇನೆ ಬಳಗ, ವಾಲ್ಮೀಕಿ ಬಳಗ, ಜೈ
ಭೀಮ ಬಳಗದವರು ಉಪಸ್ಥಿತರಿದ್ದರು.