Advertisement

ಚೀನ ಪರಮಾಪ್ತ ದೇಶ ಸ್ಥಾನಮಾನ ಹಿಂಪಡೆಯಲು ಜಾಗರಣ್‌ ಮಂಚ್‌ ಆಗ್ರಹ

05:59 AM Mar 15, 2019 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವನ್ನು ತಡೆದಿರುವ ಚೀನಕ್ಕೆ ಭಾರತ ನೀಡಿದ್ದ ಪರಮಾಪ್ತ ದೇಶ ಸ್ಥಾನಮಾನವನ್ನು ಹಿಂಪಡೆಯಬೇಕು ಎಂದು ಆರ್‌ಎಸ್‌ಎಸ್‌ ನ ಆರ್ಥಿಕ ವಿಭಾಗವಾಗಿರುವ ಸ್ವದೇಶಿ ಜಾಗರಣ್‌ ಮಂಚ್‌ (ಎಸ್‌ಜೆಎಂ), ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. 

Advertisement

”ಚೀನಕ್ಕೆ ಭಾರತ ನೀಡಿರುವ ಪರಮಾಪ್ತ ದೇಶದ ಸ್ಥಾನಮಾನವನ್ನು ಹಿಂಪಡೆಯಬೇಕು; ಜತೆಗೆ ಚೀನದ ಉತ್ಪನ್ನಗಳ ಆಮದಿನ ಮೇಲೆ ಇನ್ನಷ್ಟು ಹೆಚ್ಚಿನ ನಿರ್ಬಂಧಗಳನ್ನು ಹೇರಬೇಕು; ಚೀನದಿಂದ ಭಾರತ ಅಮದಿಸಿಕೊಳ್ಳುವ ಅದರ ಎಲ್ಲ ಉತ್ಪನ್ನಗಳ ಮೇಲಿನ ಸುಂಕವನ್ನು ಏರಿಸಬೇಕು” ಎಂದು ಎಸ್‌ಜೆಎಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದೆ. 

ಪಾಕಿಸ್ಥಾನಕ್ಕೆ  ನೀಡಲಾಗಿದ್ದ ಪರಮಾಪ್ತ ದೇಶ ಸ್ಥಾನಮಾನವನ್ನು ಭಾರತ ಈಚೆಗೆ ಹಿಂಪಡೆದ ರೀತಿಯಲ್ಲೇ ಚೀನದ ವಿರುದ್ದವೂ ಅದೇ ಅಸ್ತ್ರವನ್ನು ಪಯೋಗಿಸಬೇಕು ಎಂದು ಎಸ್‌ಜೆಎಂ ಹೇಳಿದೆ. 

ಚೀನದ ಉತ್ಪನ್ನಗಳ ಮೇಲಿನ ಆಮದು ಸುಂಕವು ರಫ್ತು ಸುಂಕಕ್ಕಿಂತ ತುಂಬ ಕಡಿಮೆ ಇದೆ. ಆದುದರಿಂದ ಈ ಸುಂಕವನ್ನು ಗಮನಾರ್ಹವಾಗಿ ಏರಿಸಬೇಕಾಗಿದೆ ಮತ್ತು ಆ ಮೂಲಕ ಚೀನ ಆಮದನ್ನು ನಿರುತ್ತೇಜಿಸಬೇಕಾಗಿದೆ; ಎಲ್ಲಕ್ಕಿಂತ ಮುಖ್ಯ ಚೀನ ಉತ್ಪನ್ನಗಳ ವಿರುದ್ದ ಜನಜಾಗೃತಿ ಆಗಬೇಕಾಗಿದೆ ಎಂದು ಎಸ್‌ಜೆಎಂ ನ ಅಖೀಲ ಭಾರತ ಸಹ ಸಂಚಾಕ ಅಶ್ವಿ‌ನಿ ಮಹಾಜನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next