Advertisement
ತಾಲೂಕಿನ ಜಿಲ್ಲಾಡಳಿತ ಭವನದ ಎದುರು ಭೂಸ್ವಾಧೀನ ಹೋರಾಟ ಸಮಿತಿ ಹಾಗೂಪಕ್ಷಾತೀತವಾಗಿ ಭೂಸ್ವಾಧೀನ ವಿರೋಧ ಹಾಗೂ ರೈತರ ಮೇಲಿನ ದೌರ್ಜನ್ಯ ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫಲವತ್ತಾದ ಭೂಮಿಯನ್ನು ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಖಂಡನೀಯ. ರೈತರ ಅಸಮಾಧಾನದ ಬಗ್ಗೆ ಅಭಿವೃದ್ಧಿ ಮಾಡಲು ತಡೆ ನೀಡಬೇಕು. ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ಕೆಐಎಡಿಬಿಯಲ್ಲಿ ನಡೆದ ಹಗರಣಗಳಲ್ಲಿ ಹಲವಾರು ಮಂತ್ರಿಗಳು ಜೈಲಿಗೆ ಹೋಗಿದ್ದಾರೆ.
Related Articles
ಮಾಹಿತಿಯಿದೆ ಎಂದು ಕಿಡಿಕಾರಿದರು.
Advertisement
ರೈತರ ಬದುಕಿನ ಜೊತೆ ಚೆಲ್ಲಾಟ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹಳ್ಳಿಗಳಲ್ಲಿ 1,777ಎಕರೆ ಜಮೀನನ್ನು 2ನೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹೊರಡಿಸಿರುವುದನ್ನು ಕೈಬಿಡಬೇಕು. ಚನ್ನರಾಯ ಪಟ್ಟಣದ ಹೋಬಳಿಯಲ್ಲಿ ವಿಮಾನ ನಿಲ್ದಾಣವಿರುವುದರಿಂದ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸಬೇಕಾಗದ ಒಂದೇ ಕಾರಣದಿಂದ ಈ ಭಾಗದಲ್ಲಿ ಫಲವತ್ತಾದ ಭೂಮಿಯಲ್ಲಿ ರೈತರು ದ್ರಾಕ್ಷಿ, ರಾಗಿ ಸೇರಿದಂತೆ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇಂತಹ ಬೆಲೆಬಾಳುವ ಭೂಮಿಯನ್ನು ಭೂಸ್ವಾಧೀನ ಮಾಡಿ, ಯಾರೋ ದಲ್ಲಾಳಿಗಳಿಗೆ ಭೂಮಿ ಕೊಡುವಂತಹದ್ದು ಈಗಿನ ಕೈಗಾರಿಕಾ ಸಚಿವರ ಬಗ್ಗೆ ಹೇಳಬೇಕಾದರೆ ಒಂದು ಬ್ರಹ್ಮಾಂಡವಾದ ವಿಷಯಗಳನ್ನು ಸಹ ಪ್ರಸ್ತಾಪನೆ ಮಾಡಬಹುದು. ಸಚಿವರು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಸಚಿವ ಸಂಪುಟದಿಂದ ನಿರಾಣಿ ಕೈಬಿಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಮತ್ತು ಐಟಿಐಆರ್‌ಗಾಗಿ ಯೋಜಿಸಿರುವ ಕುಂದಾಣ ಹೋಬಳಿಯ ನಾಲ್ಕು ಹಳ್ಳಿಗಳ 847ಎಕರೆ, ದೊಡ್ಡಬಳ್ಳಾಪುರ ತಾಲೂಕಿನ ಕಸಬಾಹೋಬಳಿಯ 1,031ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಕೆಐಎಡಿಬಿ ಸಂಸ್ಥೆಯನ್ನು ರಿಯಲ್ಎಸ್ಟೇಟ್ ಸಂಸ್ಥೆಯನ್ನಾಗಿ ಮಾರ್ಪಡಿಸಿ ರೈತರಿಗೆ ದ್ರೋಹ ಮಾಡುತ್ತಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯನ್ನು ಮಂತ್ರಿಮಂಡಳದಿಂದ ಕೈಬಿಡ ಬೇಕು ಎಂದು ಒತ್ತಾಯಿಸಿದರು. ಪಕ್ಷಾತೀತ ಪ್ರತಿಭಟನೆ ಯಶಸ್ವಿ: ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಈ ಹೋರಾಟದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ ಮತ್ತು ವಿವಿಧ ಸಂಘಟನೆಯ ಹೋರಾಟಗಾರರು ಭಾಗಿಯಾಗುವುದರ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ್ದಾರೆ. ಸರ್ಕಾರ ಈ ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯದಿದ್ದರೆ, ಈ ಹೋರಾಟ ತೀವ್ರಗತಿಯಲ್ಲಿ ಮುನ್ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಶಾಸಕ ಎಲ್.ಎನ್. ನಾರಾಯಣಸ್ವಾಮಿ, ಟಿ. ವೆಂಕಟರಮಣಯ್ಯ, ರಾಜ್ಯ ಸಿಪಿಎಂ ಕಾರ್ಯದರ್ಶಿ ಬೈರಾರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್ವಿ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‌ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮುನೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ. ಎ. ರವೀಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ವಿ. ಮಂಜುನಾಥ್, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿ ಗುಂದ ವೆಂಕಟೇಶ್,ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ತಿಮ್ಮರಾಯಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ತಾಲೂಕು ಸೊಸೈಟಿ ಅಧ್ಯಕ್ಷ ಎ. ದೇವರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್,ತಾಪಂ ಮಾಜಿ ಸದಸ್ಯ ಸಾದಹಳ್ಳಿ ಎಸ್.ಮಹೇಶ್, ಜಿಪಂ ಮಾಜಿ ಸದಸ್ಯ ಎಂ. ಬಸವರಾಜ್, ಎಂ.ವೀರಪ್ಪ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ರಾದ ವಿ.ಮುನಿರಾಜು, ರಾಮಣ್ಣ, ಕೋಡಗುರ್ಕಿ ಮಹೇಶ್,ಯರ್ತಿಗಾನಹಳ್ಳಿ ಶಿವಣ್ಣ, ರೈತ ಮುಖಂಡ ಮಾರೇಗೌಡ, ತಿಮ್ಮರಾಯಪ್ಪ, ನಂಜಪ್ಪ, ವೆಂಕಟ ರಮಣಪ್ಪ, ಮೋಹನ್, ರಮೇಶ್, ಭೈರೇಗೌಡ, ಚೇತನ್‌ಗೌಡ ಹಾಗೂ ಮತ್ತಿತರರು ಇದ್ದರು. ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿ: ಎಚ್‌ಡಿಕೆ
ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ವಲಯವನ್ನು ವಶಕ್ಕೆ ಪಡೆಯುವ ರೈತರನ್ನು ಒಕ್ಕಲೆಬ್ಬಿಸಿ ಈಗಾಗಲೇ ವಿಮಾನ ನಿಲ್ದಾಣಕ್ಕೆ 12 ಸಾವಿರಕ್ಕೂ ಅಧಿಕ ಭೂಮಿ ಕೊಟ್ಟಿದ್ದರೂ, ಅದೇ ಪ್ರದೇಶದ ಹಳ್ಳಿಗಳಲ್ಲಿ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಜನವಿರೋಧಕ್ಕೆ ಕಾರಣವಾಗುತ್ತಿದೆ. ಸರ್ಕಾರದ ಕೈಗಾರಿಕಾ ಸಚಿವರು ರೈತರ ಬದುಕಿನ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವುದು ಖಂಡನೀಯವಾಗಿದೆ.ಸರ್ಕಾರಕ್ಕೆ ಹೇಳವುದೇನೆಂದರೆ ಬೆಂಗಳೂರು ಈಗಾಗಲೇ ದೊಡ್ಡಮಟ್ಟದಲ್ಲಿ ಜನಸಂದಣಿ ಇದೆ. ಬದಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಇಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರಗಳಿಂದ
ಸಾಧ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಪುನಃ ಬೆಂಗಳೂರು ಸುತ್ತಮುತ್ತ ಕೈಗಾರಿಕೆಗಳು ಬರಬೇಕೆಂಬ ಚಿಂತನೆಗಳೇನಿದೆ. ಅದನ್ನು ಬಿಟ್ಟು ಬರಡು ಭೂಮಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.