Advertisement

ಮಹಿಳೆಯಷ್ಟೇ ಅಲ್ಲ,ಪುರುಷರಿಗೂ ಸೌಂದರ್ಯ ಪ್ರಜ್ಞೆ ಬೇಕು..ಇಲ್ಲಿದೆ Tips

11:06 AM Mar 02, 2019 | Sharanya Alva |

ಸೌಂದರ್ಯ ಪ್ರಜ್ಞೆ  ಮಹಿಳೆಯರಲ್ಲಿ  ಹೆಚ್ಚಿದ್ದರೂ ಪುರುಷರೂ ಸೌಂದರ್ಯ ಪ್ರಜ್ಞೆ  ಹೊಂದಿರಬೇಕು. ಸ್ತ್ರೀಯರಿಗೆ ಸೌಂದರ್ಯವರ್ಧಕ,  ಸೌಂದರ್ಯ ರಕ್ಷಕ ಸಲಹೆಗಳು ಇರುವಂತೆಯೇ ಪುರುಷರಿಗಾಗಿಯೇ ಇಲ್ಲಿ ಕೆಲವೊಂದು ಸೌಂದರ್ಯವರ್ಧಕ ಹಾಗೂ ಸೌಂದರ್ಯ ಪೋಷಕ ಸಲಹೆಗಳನ್ನು ನೀಡಲಾಗಿದೆ.

Advertisement

ಮೊಡವೆ ಮತ್ತು ಕಲೆ:

ಮಹಿಳೆಯರಷ್ಟೇ ಅಲ್ಲ ಪುರುಷರನ್ನೂ ಕಾಡುವ ಈ ಮೊಡವೆ ಹಾಗೂ ಕಲೆಗಳು ಹದಿಹರೆಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

– ತುಳಸಿಯ ಎಲೆಯನ್ನು ಒಣಗಿಸಿ ಪುಡಿ ಮಾಡಿ ನಿತ್ಯ ಇದರ ಫೇಸ್‌ ಪ್ಯಾಕ್‌ ಲೇಪಿಸಿ 10 ರಿಂದ 15 ನಿಮಿಷದ ಬಳಿಕ ತೊಳೆದರೆ ಮೊಡವೆ ಮತ್ತು ಕಲೆ ನಿವಾರಣೆಯಾಗುತ್ತದೆ.

Advertisement

– ಜೇನು ತುಪ್ಪ,ನಿಂಬೆರಸ,ಗುಲಾಬಿ ಜಲ ಬೆರೆಸಿ ಮೊಡವೆಗಳಿಗೆ ಲೇಪಿಸಿದರೆ ಶಮನಕಾರಿ.

– ಹಾಲು ಹಾಗೂ ಜೇನು ಬೆರೆಸಿದರೆ ಕಲೆ ನಿವಾರಕ.

– ಪುದೀನಾ ಸೊಪ್ಪಿನ ರಸ ಹಾಗೂ ಜೇನು ಬೆರೆಸಿ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ.

ಕೂದಲು ಉದುರುವಿಕೆ

ಪುರುಷರನ್ನು ಹೆಚ್ಚು ಕಾಡುವ ಕೂದಲು ಉದುರುವಿಕೆ ಸಮಸ್ಯೆಗೆ ಬಯೊಟಿನ್‌ ಹೆಚ್ಚಿರುವ ಆಹಾರ ಸೇವನೆ ಹಿತಕರ. ಕಿತ್ತಳೆ,ನೆಲ್ಲಿ,ಸೀಬೆ,ನಿಂಬೆ ಮುಂತಾದ ವಿಟಮಿನ್‌ ಸಿ ಅಧಿಕವಿರುವ ಹಣ್ಣುಗಳ ಸೇವನೆ ಫ‌ಲಕಾರಿ. ಸೊಪ್ಪು ತರಕಾರಿಗಳು ,ಮೊಳಕೆ ಬರಿಸಿದ ಧಾನ್ಯ ,ಹಾಲು-ಮೊಸರು ಉಪಯುಕ್ತ.

– ಅರ್ಧ ಕಪ್‌ ಎಳನೀರಿಗೆ ಅರ್ಧ ನಿಂಬೆರಸ ಹಿಂಡಿ ಕೂದಲಿಗೆ ಲೇಪಿಸಬೇಕು ಬಳಿಕ ಬೆರಳ ತುದಿಯಿಂದ ಮಾಲೀಶು ಮಾಡಿದರೆ ರಕ್ತ ಸಂಚಾರ ವರ್ಧಿಸಿ ಪೋಷಕಾಂಶಗಳು ದೊರೆತು ಕೂದಲು ಉದುರುವಿಕೆ ನಿಲ್ಲುತ್ತವೆ.

– ತಲೆ ಹೊಟ್ಟಿನ ಸಮಸ್ಯೆಯಿಂದ ಕೂದಲು ಉದುರುವಿಕೆ ಹೆಚ್ಚಿದ್ದರೆ ಹುಣಸೆ ರಸಕ್ಕೆ ಬೆಲ್ಲ ಬೆರೆಸಿ ಲೇಪಿಸಿ 10-15 ನಿಮಿಷದ ಬಳಿಕ ಕೂದಲು ತೊಳೆಯಬೇಕು.

– ಮೆಂತೆ ಸೊಪ್ಪನ್ನು ಮೊಸರಿನೊಂದಿಗೆ ಅರೆದು ಹೇರ್‌ ಪ್ಯಾಕ್‌ ಮಾಡಬೇಕು. ಒಂದು ಗಂಟೆಯ ಬಳಿಕ ತಲೆ ಸ್ನಾನ ಮಾಡಿದರೆ ಹೆಚ್ಚು ಉದುರುವುದು ನಿಲ್ಲುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.

– ಕೊಬ್ಬರಿ ಎಣ್ಣೆಗೆ ತುಳಸಿ ಎಲೆ,ಬಿಳಿ ದಾಸವಾಳದ ಹೂ ಹಾಗೂ ಮೆಂತೆ ಕಾಳುಗಳನ್ನು ಹಾಗಿ ಚೆನ್ನಾಗಿ ಕುದಿಸಬೇಕು. ಈ  ಎಣ್ಣೆಯನ್ನು ನಿತ್ಯ ಹಚ್ಚಿದರೆ ಕೂದಲು ಉದುರುವಿಕೆ ನಿಲ್ಲುತ್ತದೆ.

ಮುಖದ ನೆರಿಗೆ:

– ಹಾಲಿನ ಕೆನೆಗೆ ಸೌತೆ ರಸ,ಅರಸಿನ ಪುಡಿ ಬೆರೆಸಿ ಮೃದುವಾಗಿ ಮಾಲೀಶು ಮಾಡಿದರೆ ನೆರಿಗೆಗಳು ಕಡಿಮೆಯಾಗುತ್ತದೆ.

– ಕ್ಯಾರೆಟ್‌ ಅರೆದು ಹಾಲಿನ ಜೊತೆಗೆ ಬೆರೆಸಿ ಫೇಸ್‌ ಪ್ಯಾಕ್‌ ಮಾಡಿದರೆ ಮುಖದ ನೆರಿಗೆಗಳು ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next