ಭೋಪಾಲ್: ಇತ್ತೀಚೆಗೆ, ಆಂಧ್ರದ ನೆಲ್ಲೂರಿನಲ್ಲಿ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದಿದ್ದಕ್ಕೆ ತಂದೆಯೊಬ್ಬ ತನ್ನ ಮಗನ ಮೃತದೇಹವನ್ನು ಬೈಕಿನಲ್ಲಿ ತನ್ನ ಮನೆಗೆ ಸಾಗಿಸಿದ ಘಟನೆ ನಡೆದಿತ್ತು.
ಅದೇ ರೀತಿ, ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ತನ್ನ ಮಗುವಿನ ಶವವನ್ನು ಪಡೆಯಲು ಆ ಮಗುವಿನ ಹೆತ್ತವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 4 ವರ್ಷದ ಮಗಳನ್ನು ಮನೆಗೆ ಕರೆದೊಯ್ಯಲು ಶವಾಗಾರದ ವಾಹನ ಸಿಗದ ಹಿನ್ನೆಲೆ, ತಂದೆಯು ಮಗಳ ದೇಹವನ್ನು ಹೆಗಲ ಮೇಲೆಯೇ ಹೊತ್ತೊಯ್ದಿರುವ ಘಟನೆ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪೌಡಿ ಗ್ರಾಮದ ಬಾಲಕಿಯನ್ನು ಸೋಮವಾರ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಬಾಲಕಿಯ ತಂದೆ ಲಕ್ಮಣ್ ಆಕೆಯ ಶವವನ್ನು ಸಾರ್ವಜನಿಕ ಬಸ್ಸಿನಲ್ಲಿ ತಂದಿದ್ದಾನೆ. ಅಲ್ಲಿಂದಲಾದರೂ ಗಾಡಿ ಕೊಡಿ ಎಂದು ನಗರಸಭೆಗೆ ಕೇಳಿದ್ದಾನಾದರೂ ಅಲ್ಲಿಯೂ ಗಾಡಿ ಸಿಕ್ಕಿಲ್ಲ. ಹಾಗಾಗಿ ಆತ ಶವವನ್ನು ಹೆಗಲ ಮೇಲೆ ಹೊತ್ತುಕೊಂಡೇ ಊರಿಗೆ ತೆರಳಿದ್ದಾನೆ. ಆದರೆ ಶವಾಗಾರದ ವಾಹನ ಕೇಳಿ ತಮ್ಮ ಬಳಿ ಯಾರೂ ಬರಲಿಲ್ಲವೆಂದು ದಾಮೋಹ್‌ನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.