Advertisement

ಕನ್ನಡ ಮೀಡಿಯಂ ರಾಜು ಜೊತೆ ಕ್ರೇಜಿ ಆಶಿಕಾ

11:26 AM Jan 09, 2017 | Team Udayavani |

“ಕ್ರೇಜಿಬಾಯ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆಶಿಕಾ ನಿಧಾನವಾಗಿ ಈಗ ಬಿಝಿಯಾಗುತ್ತಿದ್ದಾರೆ. ಈಗಾಗಲೇ ಗಣೇಶ್‌ ನಾಯಕರಾಗಿರುವ “ಮುಗುಳ್ನಗೆ’ ಚಿತ್ರದಲ್ಲಿ ನಟಿಸುತ್ತಿರುವ ಆಶಿಕಾ ಸದ್ದಿಲ್ಲದೇ ಮತ್ತೂಂದು ಚಿತ್ರದಲ್ಲೂ ನಟಿಸಿದ್ದಾರೆ. ಅದು “ರಾಜು ಕನ್ನಡ ಮೀಡಿಯಂ’. ಹೌದು, ಆಶಿಕಾ ಈ ಚಿತ್ರದಲ್ಲೂ ಹೈಸ್ಕೂಲು ಹುಡುಗಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. 

Advertisement

ನರೇಶ್‌ ನಿರ್ದೇಶನದ ಈ ಚಿತ್ರದಲ್ಲಿ ಗುರು ನಂದನ್‌ ನಾಯಕರಾಗಿ ನಟಿಸಿದ್ದು, ಆವಂತಿಕಾ ಶೆಟ್ಟಿ ನಾಯಕಿ. ಎಲ್ಲಾ ಓಕೆ, ಆಶಿಕಾಗೇನು ಇಲ್ಲಿ ಕೆಲಸ ಎಂದು ನೀವು ಕೇಳಬಹುದು. ಆಶಿಕಾ ಚಿತ್ರದ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದನ್ನು ನೀವು ಹೈಸ್ಕೂಲ್‌ ಲವ್‌ಸ್ಟೋರಿ ಎಂದು ಕರೆಯಲಡ್ಡಿಯಿಲ್ಲ. ಮಲೆನಾಡಿನ ಹುಡುಗಿಯಾಗಿ ಕಾಣಿಸಿಕೊಂಡಿರುವ ಆಶಿಕಾ ಸ್ಕೂಲ್‌ ಯೂನಿಫಾರಂನಲ್ಲಿ ಮಿಂಚಿದ್ದಾರೆ.

ನಾಯಕನ ಶಾಲಾ ದಿನಗಳ ಲವ್‌ಸ್ಟೋರಿ ತೆರೆದುಕೊಳ್ಳುತ್ತಿದ್ದಂತೆ ಅಲ್ಲಿ ಆಶಿಕಾ ಪಾತ್ರ ತೆರೆದುಕೊಳ್ಳಲಿದೆಯಂತೆ. ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಮಲೆನಾಡ ಹಿನ್ನೆಲೆಯನ್ನು ಚಿತ್ರೀಕರಿಸಲಾಗಿದೆ. ಇಲ್ಲಿ ಆಶಿಕಾಗೆ ತುಂಬಾ ಕ್ಯೂಟ್‌ ಆದ ಪಾತ್ರ ಸಿಕ್ಕಿದ್ದು, ಚಿತ್ರಕ್ಕೆ ಟ್ವಿಸ್ಟ್‌ ಕೊಡುವಲ್ಲಿ ಈ ಪಾತ್ರ ಪ್ರಮುಖವಾಗಿರುತ್ತದೆಯಂತೆ. ಆರಂಭದಲ್ಲಿ ಈ ಚಿತ್ರಕ್ಕೆ “ರಾಜು ರಂಗಿತರಂಗ’ ಎಂದು ಹೆಸರಿಡಲಾಗಿತ್ತು. ಆದರೆ ಈಗ ಚಿತ್ರದ ಟೈಟಲ್‌ ಬದಲಾಗಿದ್ದು, “ರಾಜು ಕನ್ನಡ ಮೀಡಿಯಂ’ ಎಂದು ಬದಲಿಸಲಾಗಿದೆ.

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳಲಿದೆ. ಈ ಚಿತ್ರವನ್ನು ಕೆ.ಎ.ಸುರೇಶ್‌ ನಿರ್ಮಿಸುತ್ತಿದ್ದಾರೆ. “ಶಿವಲಿಂಗ’ ಚಿತ್ರದ ಗೆಲುವಿನ ನಂತರ ಸುರೇಶ್‌ ನಿರ್ಮಿಸುತ್ತಿರುವ ಸಿನಿಮಾ ಇದಾಗಿದ್ದು, “ಫ‌ಸ್ಟ್‌ರ್‍ಯಾಂಕ್‌ ರಾಜು’ ನರೇಶ್‌ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಎರಡು ಯಶಸ್ವಿ ತಂಡಗಳು ಜೊತೆಯಾಗಿ “ರಾಜು ಕನ್ನಡ ಮೀಡಿಯಂ’ ಮಾಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next