Advertisement
ಹಾಸ್ಯ ಎನ್ನುವುದು ಒಂದು ವಿದ್ಯೆ ಅಥವಾ ಕಲೆ. ಇದನ್ನು ಎಲ್ಲರೂ ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಮುಖ್ಯವಾಗಿ ಬೇಕಿರು ವುದು ಆಸಕ್ತಿ ಅಥವಾ ಹವ್ಯಾಸ. ಹಾಗಿದ್ದರೆ ಮಾತ್ರ ಇಂತಹ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಬಹುದು.
ಹಾಸ್ಯ ಎನ್ನುವುದು ಯಾವುದನ್ನೂ ಬಿಟ್ಟಿಲ್ಲ. ಆದ್ದರಿಂದ ಇದು ಎವರ್‌ಗ್ರೀನ್ ಎಂದೆನ್ನಬಹುದು. ಸ್ಟ್ಯಾಂಡಿಂಗ್ ಕಾಮಿಡಿಯನ್ ಆಗಿ ಕಾರ್ಯಕ್ರಮಗಳನ್ನು ನೀಡಬಹುದು. ಪ್ರತ್ಯೇಕ ಗುಂಪನ್ನು ರಚಿಸಿ ಸುತ್ತಾಡುತ್ತಾ ಕಾರ್ಯಕ್ರಮ ಕೊಡಬಹುದು. ಟಿ.ವಿ. ಮಾಧ್ಯಮದ ಮೂಲ ಕವೂ ಕಾಮಿಡಿ ಶೋ ನೀಡಬಹುದು. ರಿಯಾಲಿಟಿ ಶೋ, ಕಾಮಿಡಿ ಶೋಗಳಲ್ಲಿ ಭಾಗವಹಿಸಬಹುದು. ಇದು ಒಂದು ಸ್ವತಂತ್ರ ವಿದ್ಯೆ ಎನ್ನಬಹುದು. ಮಾತ್ರವಲ್ಲದೆ ಪಾರ್ಟ್ ಟೈಮ್, ಫುಲ್ ಟೈಮ್ ಆಗಿ ಇದರಲ್ಲಿ ತೊಡಗಿಸಿಕೊಳ್ಳಬಹುದು.
Related Articles
Advertisement
ಹಾಸ್ಯಗಾರನಿಗೆ ಇವು ಅವಶ್ಯಹಾಸ್ಯಗಾರನಿಗೆ ಮುಖ್ಯವಾಗಿ ಜ್ಞಾನ, ಭಾಷೆ, ಸಾಹಿತ್ಯ, ಸಂಗೀತ, ಪ್ರಚಲಿತ ವಿದ್ಯಮಾನ, ವಿಮರ್ಶೆ, ಗ್ರಹಿಕೆ, ಕ್ರಿಯಾಶೀಲತೆ, ಸೃಜನಶೀಲತೆ, ವರ್ಣನೆ, ಟೀಕೆ ಜತೆಗೆ ನವರಸಗಳನ್ನು ಅರಿತಿರಬೇಕು. ದೇಶ ಸುತ್ತಬೇಕು- ಕೋಶ ಓದಬೇಕು. ಜತೆಗೆ ವಾಕ್ ಚಾತುರ್ಯ ಹೊಂದಿರಬೇಕು. ಸರಳ ಮಾತುಗಳಿಂದ, ಹಾವ ಭಾವದಿಂದ ತಮ್ಮ ಬಾಡಿ ಲ್ಯಾಂಗ್ವೇಜ್ ಮುಖಾಂತರ ನೆರೆದವರ ಮನಸ್ಸು ಮುಟ್ಟುವಂತಿರಬೇಕು. ಭರತ್ ರಾಜ್ ಕರ್ತಡ್ಕ